×
Ad

ಕಾಳು ಮೆಣಸು ಆಮದು ಸುಂಕ ನಿಗದಿ: ಸಂಸದ ನಳಿನ್‌

Update: 2017-12-06 21:00 IST

ಮಂಗಳೂರು, ಡಿ. 6: ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಕಾಳು ಮೆಣಸಿನ ಮೇಲಿನ ಆಮದು ಸುಂಕವನ್ನು ಪ್ರತಿ ಕೆ.ಜಿ.ಗೆ 500 ರೂ. ನಿಗದಿ ಪಡಿಸುವ ಪ್ರಸ್ತಾವನೆಯನ್ನು ಅಂಗೀಕರಿಸುವ ಮೂಲಕ ಬೆಳೆಗಾರರ ತ ರಕ್ಷಣೆ ಮಾಡಿದೆ. ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತು ಸಹಾಯಕ ಸಚಿವ ಸಿ.ಆರ್. ಚೌಧರಿ ಅವರಿಗೆ ರಾಜ್ಯದ ಕಾಳು ಮೆಣಸು ಬೆಳೆಗಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ದೇಶದಿಂದ ಭಾರಿ ಪ್ರಮಾಣದಲ್ಲಿ ಕಡಿಮೆ ದರದ ಕಾಳು ಮೆಣಸು ಆಮದು ಆಗುತ್ತಿದ್ದ ಪರಿಣಾಮ ಬೆಲೆ ಕುಸಿತವಾಗಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಗರಿಷ್ಠ ಆಮದು ಸುಂಕ ನಿಗದಿ ಪಡಿಸುವ ಮೂಲಕ ಇದನ್ನು ನಿಯಂತ್ರಿಸಲು ಬೆಳೆಗಾರರು ಹಕ್ಕೊತ್ತಾಯ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ವಿನಂತಿಸಲಾಗಿತ್ತು. ಇದೀಗ ಪೂರಕ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ ಎಂದು ಸಂಸದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News