ಪುತ್ತೂರು;ಸಂಘಪರಿವಾರ ಸಂಘಟನೆಗಳಿಂದ ಸಂಭ್ರಮಾಚರಣೆ : ಪೊಲೀಸರಿಂದ ತಡೆ
Update: 2017-12-06 21:02 IST
ಪುತ್ತೂರು,ಡಿ.6: ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನವನ್ನು ಸಂಘಪರಿವಾರ ಸಂಘಟನೆಗಳು ಶೌರ್ಯ ದಿನವನ್ನಾಗಿ ಆಚರಿಸಿದ್ದು ಬುಧವಾರ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಂಭ್ರಮಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಅಲ್ಲಿಗಾಗಮಿಸಿದ ನಗರ ಠಾಣಾ ಪೊಲೀಸರು ಸಂಘಟನೆಯ ಕಾರ್ಯಕರ್ತರನ್ನು ಚದುರಿಸಿದರು. ಸಂಘಟನೆಗಳ ಮುಖಂಡ ಅರುಣ್ ಕುಮಾರ್, ಪ್ರಮುಖರಾದ ಅಜಿತ್ ರೈ ಹೊಸಮನೆ, ನ್ಯಾಯವಾದಿ ಚಿನ್ಮಯ್, ದಿನೇಶ್, ಅವಿನಾಶ್ ಮೊದಲದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಬಸ್ ನಿಲ್ದಾಣದ ಬಳಿ ಶೌರ್ಯ ದಿವಸ ನಡೆಸಲು ಸಂಘಟನೆಯ ಕಾರ್ಯಕರ್ತರು ನಿರ್ಧರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆಚರಿಸದಂತೆ ತಡೆದರು. ಅಲ್ಲಿಂದ ತೆರಳಿದ ಕಾರ್ಯಕರ್ತರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ನಗರ ಠಾಣಾ ಪೊಲೀಸರು ಸೇರಿದ್ದ ಸಂಘಟನೆಯ ಕಾರ್ಯಕರ್ತರನ್ನು ಚದುರಿಸಿದರು.