×
Ad

ಸುಜ್ಲಾನ್: ಲಾಕೌಟ್ ಹಿಂದಕ್ಕೆ

Update: 2017-12-06 21:10 IST

ಪಡುಬಿದ್ರಿ,ಡಿ.6: ಕಳೆದ ತಿಂಗಳು ಲಾಕೌಟ್ ಘೋಷಣೆ ಮಾಡಿರುವ ಸುಜ್ಲಾನ್ ಕಂಪೆನಿಯು ಗುರುವಾರದಿಂದ ಮತ್ತೆ ಕಾರ್ಯಾಚರಿಸಲಿದೆ.

ಬುಧವಾರ ಕಂಪೆನಿ ಅಧಿಕಾರಿಗಳು, ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕರ ಮಧ್ಯೆ ನಡೆದ ಮಾತುಕತೆಯಲ್ಲಿ ಕಂಪೆನಿ ಮುಚ್ಚುಗಡೆಯನ್ನು ಹಿಂದೆಗೆದುಕೊಂಡು ಮತ್ತೆ ಪುನರಾರಂಭಗೊಳಿಸುವ ಬಗ್ಗೆ ಸುಜ್ಲಾನ್ ಕಂಪೆನಿ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಘೋಷಿಸಿದರು. ಕಂಪೆನಿಯ 320 ಕಾರ್ಮಿಕರನ್ನೂ ಮತ್ತೆ ಸೇರ್ಪಡೆಗಳಿಸುವುದಾಗಿ ಹೇಳಿದರು. 

ಹೊರ ರಾಜ್ಯದ ಕಂಪೆನಿ ಕಾರ್ಮಿಕರನ್ನು ಮುಂದಿನ ವಾರದಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗುವುದು ಎಂದು ಕಂಪೆನಿ ಅಧಿಕಾರಿ ವಿಜಯ್ ಅಶ್ನಾನಿ ಸಭೆಯಲ್ಲಿ ತಿಳಿಸಿದರು.

ಗುರುವಾರವೇ ಲಾಕ್‍ಔಟ್ ತೆರವುಗೊಳಿಸುವುದಾಗಿ ಕಂಪನಿ ಮುಖ್ಯಸ್ಥರು ತಿಳಿಸಿದ್ದು,280 ಕಾರ್ಮಿಕರು ಗುರುವಾರವೇ ಕೆಲಸಕ್ಕೆ ಹಾಜರಾಗಲಿದ್ದಾರೆ.ಬಿಹಾರ,ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾಗಳ ಸುಮಾರು 50 ಕಾರ್ಮಿಕರಿಗೆ ವಾರದ ಕಾಲಾವಕಾಶ ನೀಡಲಾಗಿದ್ದು,ಮುಂದಿನ ಗುರುವಾರದ ಒಳಗೆ ಅವರು ಕೆಲಸಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.

ಗುರುವಾರ ಶಾಸಕರ ಜತೆ ಕಾರ್ಮಿಕರ ಸಭೆ : ಲಾಕ್‍ಔಟ್ ತೆರವುಗೊಳ್ಳುವ ಸಮಯ ಗುರುವಾರ ಮಧ್ಯಾಹ್ನ ಒಂದು ಗಂಟೆಗೆ 280 ಕಾರ್ಮಿಕರ ಜತೆ ಶಾಸಕರು,ಇಂಟಕ್ ಮುಖಂಡರು ಸಭೆ ನಡೆಸಿ ಸಮಾಲೋಚನೆ ನಡೆಸಲಿದ್ದಾರೆ.ಬಳಿಕ ವಿಜಯೋತ್ಸವದೊಂದಿಗೆ ಕಾರ್ಮಿಕರು ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್ ತಿಳಿಸಿದ್ದಾರೆ.

ಪಡುಬಿದ್ರಿ ಬಳಿ ಕಾರ್ಯಾಚರಿಸುತ್ತಿರುವ ಸುಜ್ಲಾನ್ ಕಂಪೆನಿ ನಷ್ಟದ ನೆಪವೊಡ್ಡಿ ನವೆಂಬರ್ 14 ರಿಂದ ಏಕಾಏಕಿ ಮುಚ್ಚುಗಡೆಯ ಬಗ್ಗೆ ಘೋಷಣೆ ಮಾಡಿತ್ತು. ಇದನ್ನು ಖಂಡಿಸಿ ಕಂಪೆನಿ ಕಾರ್ಮಿಕರು ಇಂಟೆಕ್ ಮುಖಂಡರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಕಂಪೆನಿ ಅಧಿಕಾರಿಗಳು, ಕಾರ್ಮಿಕರನ್ನು ಸೇರಿಸಿಕೊಂಡು ಕಂಪೆನಿ ಅಧಿಕಾರಿಗಳು ಸಭೆ ನಡೆಸಿ ಕಳೆದ ವಾರ ಮುಚ್ಚುಗಡೆಯನ್ನು ಹಿಂದಕ್ಕೆ ಪಡೆದುಕೊಂಡಿತು. 

ಕಂಪೆನಿ ಅಧಿಕಾರಿಗಳಾದ ಅನಾದಿ ಸತಿ, ದಕ್ಷಿಣ್ ಮೂರ್ತಿ, ಆಂಟೊನಿ ಫಿಲಿಪ್, ದಕ್ಷಿಣ  ಮೂರ್ತಿ, ಅಶೋಕ್ ಕುಮಾರ್ ಶೆಟ್ಟಿ, ಸುರೇಶ್ ಪಿ.ಕೆ, ಡಿ.ಆರ್.ನಾರಾಯಣ್, ಗಣೇಶ್ ಕೋಟ್ಯಾನ್, ಮನೋಹರ್ ಶೆಟ್ಟಿ, ನವೀನ್‍ಚಂದ್ರ ಶೆಟ್ಟಿ, ಅಬೂಬಕ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News