ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ‘ಮುಸ್ಲಿಮ್ ಲೀಗ್’ನಿಂದ ಡಿಸಿಗೆ ಮನವಿ
Update: 2017-12-06 21:14 IST
ಮಂಗಳೂರು, ಡಿ.5: ಬಾಬರಿ ಮಸೀದಿ ಪುನರ್ ನಿರ್ಮಾಣ ಹಾಗೂ ಮಸೀದಿ ಧ್ವಂಸ ಆರೋಪಿಗಳನ್ನು ಶಿಕ್ಷಿಸಬೇಕು ಮತ್ತು ಲಿಬರ್ಹಾನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಅಗ್ರಹಿಸಿ ಮುಸ್ಲಿಮ್ ಲೀಗ್ ದ.ಕ ಜಿಲ್ಲಾ ಸಮಿತಿಯ ನಿಯೋಗವು ಜಿಲ್ಲಾದಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮುಸ್ಲಿಮ್ ಲೀಗ್ ರಾಜ್ಯ ಉಪಾಧ್ಯಕ್ಷ ಸಿ. ಅಹ್ಮದ್ ಜಮಾಲ್, ರಿಯಾಝ್ ಹರೇಕಳ ಇಸ್ಮಾಯೀಲ್ ಎಂ.ಕೆ. ಅಶ್ರಫ್ ಶಾಹಿದ್ ಪಾದೆ, ಹಾಜಿ ಅಬ್ದುರ್ರಹ್ಮಾನ್ ಮತ್ತಿತರರು ನಿಯೋಗದಲ್ಲಿದ್ದರು.