×
Ad

ಆಯರ್ವೇದಲ್ಲೂ ಆರೋಗ್ಯ ವಿಮೆ ಸೌಲಭ್ಯ: ಪ್ರೊ.ಗುರುದೀಪ್ ಸಿಂಗ್

Update: 2017-12-06 21:23 IST

ಉಡುಪಿ, ಡಿ.6: ಈ ಹಿಂದೆ ಆಯರ್ವೇದ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವವರಿಗೆ ಯಾವುದೇ ಆರೋಗ್ಯ ವಿಮೆ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದರೆ ಈಗ ಆಯುರ್ವೇದದಲ್ಲೂ ಆರೋಗ್ಯ ವಿಮೆ ಸೌಲಭ್ಯವನ್ನು ಪಡೆಯ ಬಹುದು ಎಂದು ಜಾಮ್‌ನಗರ್ ಐಪಿಜಿಟಿ ಆ್ಯಂಡ್ ಆರ್ ಇದರ ಮಾಜಿ ಡೀನ್ ಪ್ರೊ.ಗುರುದೀಪ್ ಸಿಂಗ್ ಹೇಳಿದ್ದಾರೆ.

ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾಲೇಜಿನ ಮೊದಲ ವರ್ಷದ ಆಯರ್ವೇದಾಚಾರ್ಯ(ಬಿಎಎಂಎಸ್) ವಿದ್ಯಾರ್ಥಿಗಳ ಶಿಷ್ಯೋಪನಯ ಸಂಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ದಶಕಗಳ ಹಿಂದೆ ಆರ್ಯವೇದದ ಕುರಿತು ಜನರಿಗೆ ಸಾಕಷ್ಟು ಮಾಹಿತಿಯ ಕೊರೆತೆ ಇತ್ತು. ಆದರೆ ಇಂದು ಜನರೆ ಆರ್ಯವೇದದ ಆಸ್ಪತ್ರೆಯನ್ನು ಹುಡುಕಿ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಆಯುರ್ವೇದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳು ವುದು ಕೂಡ ಹೆಚ್ಚಾಗುತ್ತಿವೆ ಎಂದರು.

ಉಜಿರೆ ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯ ಎಕ್ಸಿಕ್ಯೂಟಿವ್ ಆಫೀಸರ್ ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣ ಡೀನ್ ಪಿ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾಕರ್ ಉಪಾ ಧ್ಯಾಯ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನದ ಡೀನ್ ಡಾ.ಬಿ.ಆರ್. ದೊಡ್ಡಮನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News