ಶಿಕ್ಷಣ ವ್ಯವಸ್ಥೆ ಬದಲಾಗಲಿ: ಲಬೀದ್ ಶಾಫಿ
ಮಂಗಳೂರು, ಡಿ.6: ಇಂದು ಶಿಕ್ಷಣ ರಂಗವು ವ್ಯಾಪಾರೀಕರಣದ ಕಡೆಗೆ ವಾಲುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಶ್ರಮಿಸಬೇಕಾಗಿದೆ ಎಂದು ಎಸ್.ಐ.ಓ. ರಾಷ್ಟ್ರೀಯ ಕಾರ್ಯದರ್ಶಿ ಲಬೀದ್ ಶಾಫಿ ಹೇಳಿದ್ದಾರೆ.
ಅವರು ನಗರದ ಶ್ರೀನಿವಾಸ ಸಂಸ್ಥೆಯಲ್ಲಿ ನಡೆದ ‘‘ಹಿಂದಿ ಮೀಡಿಯಂ’’ ಚಿತ್ರ ಪ್ರದರ್ಶನ ಮತ್ತು ವಿಮರ್ಶೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದು ಸರಕಾರವು ಸಾವಿರಾರು ಸರಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಅದೇ ಸಮಯದಲ್ಲಿ ಅರ್.ಟಿ.ಇ. ಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಖಾಸಗಿ ಶಾಲೆಗೆ ಸುರಿಯುತ್ತಿದೆ. ಸರಕಾರವು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ನೀಡುತ್ತಿಲ್ಲ ಎಂಬುದು ಖೇದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ನಿವಾಸ ಶಿಕ್ಷಣ ಸಂಸ್ಥೆಯ ಡಾ.ಜಯಶ್ರೀ ಕೆ. ಮತ್ತು ಸಂವೇದನಾ ಫಿಲ್ಮ್ ಡೋಕ್ಯುಮೆಂಟರಿ ಕ್ಲಬ್‌ನ ರೋಶ್ ಮ್ಯಾಥಿವ್, ಎಸ್.ಐ.ಓ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ಕೆ.ಪಿ. ಉಪಸ್ಥಿತರಿದ್ದರು.