ಬಿಸಿಸಿಐ ವತಿಯಿಂದ ಉದ್ಯಮಶೀಲತಾ ಕಾರ್ಯಾಗಾರ
ಮಂಗಳೂರು,ಡಿ.6: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ) ವತಿಯಿಂದ ಆರು ದಿನಗಳ ಉದ್ಯಮಶೀಲತಾ ಸರ್ಟಿಫಿಕೆಟ್ ಕಾರ್ಯಾಗಾರ ಡಿ.18 ರಿಂದ 23ರ ತನಕ ನಡೆಯಲಿದೆ.
ಯುವ ಉದ್ಯಮಿಗಳಿಗೆ ಹೊಸ ಉದ್ಯಮ ಸ್ಥಾಪನೆ ಬಗ್ಗೆ ಜಾಗೃತಿ ಮೂಡಿಸಲು, ಸಹಕಾರ ನೀಡಿ ಪ್ರೋತ್ಸಾಹಿಸಲು, ವಿವಿಧ ದೇಶ ಮತ್ತು ಸಂಸ್ಕೃತಿಗಳ ಉದ್ಯಮಗಳನ್ನು ಪರಿಚಯಿಸಲು, ಉದ್ಯಮ ಕ್ಷೇತ್ರದ ಸಂಪನ್ಮೂಲ ಮತ್ತು ಸವಾಲುಗಳ ಬಗ್ಗೆ ಹಾಗೂ ಕಾನೂನು ಮಾಹಿತಿ ನೀಡಿ ಸಿದ್ಧಪಡಿಸಲು ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಆಹಾರದ ಸೌಲಭ್ಯ ಕಲ್ಪಿಸಲಾಗುತ್ತದೆ. ಆಸಕ್ತರು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಅವರನ್ನು ದೂರವಾಣಿ ಸಂಖ್ಯೆ 0824- 4262323, ವಿಳಾಸ- ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಬಿ-8, ತಳ ಅಂತಸ್ತು, ವಿಶ್ವಾಸ್ ಕ್ರೌನ್, ಓಲ್ಡ್ ಕಂಕನಾಡಿ ಬೈಪಾಸ್ ರಸ್ತೆ, ಮಂಗಳೂರು- 575002, ಅಥವಾ bearyschamber@gmail.com ಅಥವಾ ಖಾಲಿದ್ ತಣ್ಣೀರು ಬಾವಿ, ಆಡಳಿತಾಧಿಕಾರಿ ,ಮೊಬೈಲ್ 9900117080 ಇವರನ್ನು ಸಂರ್ಕಿಸಲು ಕೋರಲಾಗಿದೆ.
ಕೆಲವೇ ಕೆಲವು ಸೀಟುಗಳು ಉಳಿದಿರುವುದಾಗಿ ಹಾಗೂ 40 ಪ್ರತಿನಿಧಿಗಳಿಗೆ ಮಾತ್ರ ಸ್ಥಳವಕಾಸವಿರುದಾಗಿ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಜನಾಬ್ ರಶೀದ್ ಹಾಜಿಯವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.