ಸಂಶೋಧನೆಯಿಂದ ಸಮಾಜಕ್ಕೆ ಸಹಾಯವಾಗಬೇಕು: ಪ್ರೊ.ಶಾಂತರಾಮ ಶೆಟ್ಟಿ
ಕೊಣಾಜೆ, ಡಿ. 7: ಯಾವುದೇ ಸಂಶೋಧನೆಯು ಅದು ಸಮಾಜಕ್ಕೆ ಉಪಯೋಗವಾಗಬೇಕಿದೆ. ನಮ್ಮ ಸಂಶೋಧನೆ ಸಮಾಜಕ್ಕೆ ಸಹಾಯವಾಗಬೇಕಾದರೆ ಸಂಶೋಧನೆ ನಡೆಸಿದ ಬಳಿಕ ಅದನ್ನು ಅಷ್ಟೇ ಜವಾಬ್ದಾರಿಯುತವಾಗಿ ದಾಖಲಿಸಿ ಇಡುವುದು ಅತ್ಯಗತ್ಯವಾಗಿದ್ದು ಜಪಾನ್, ದ.ಕೊರಿಯಾ ಆ ವಿಚಾರದಲ್ಲಿ ಬಹಳಷ್ಟು ಮುಂದುವರಿದಿದೆ ಎಂದು ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ವಿವಿಯ ಕೆ.ಎಸ್. ಹೆಗ್ಡೆ ಆಡಿಡೋರಿಯಂನಲ್ಲಿ ಇಂಡಿಯನ್ ವೈರೊಲಾಜಿಕಲ್ ಸೊಸೈಟಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ವೈರೋಕಾನ್-2017 ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಡೆಗೊಳಿಸಿ ಅವರು ಮಾತನಾಡಿದರು.
ಇಂದು ತಂತ್ರಜ್ಞಾನ ವಿಜ್ಞಾನ ಕ್ಷೇತ್ರವು ಬಹಳಷ್ಟು ಬದಲಾವಣೆಯನನು ಕಂಡಿದ್ದು, ಈ ನಿಟ್ಟಿನಲ್ಲಿ ವೈಜ್ಣಾನಿಕ ಕ್ಷೇತ್ರದಲ್ಲಿ ವಿಜ್ಞಾನಿಳು ಮನಸ್ಸು ಮಾಡಿದರೆ ಜಗತ್ತಿನ ಹಲವಾರು ಪರಿವರ್ತನೆಗಳಿಗೆ ಕಾರಣಕರ್ತರಾಗಬಹುದು. ಯುವ ಸಂಶೋಧಕರು ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ನಿಟ್ಟೆ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ನಿಟ್ಟೆ ವಿವಿಯ ಕುರಿತಾಗಿ ಪರಿಚಯಿಸಿ, ಎ ಸೆಂಚುರಿ ಆಫ್ ಪ್ಲಾಂಟ್ ವೈರಾಲಾಜಿ ಇನ್ ಇಂಡಿಯಾ ಕೃತಿ ಬಿಡುಗಡೆಗೊಳಿಸಿದರು.
ಪ್ರೊ. ಜೈನ್ ಮಂಡಲ್ ಅವರು ಕೃತಿಯ ಬಗ್ಗೆ ವಿವರಿಸಿದರು. ಇಂಡಿಯನ್ ವೈರೊಲಾಜಿಕಲ್ ಸೊಸೈಟಿ ಅಧ್ಯಕ್ಷ ಪ್ರೊ. ಅನುಪಮ್ ವರ್ಮ ಮಾತನಾಡಿ ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದೆ. ಉತ್ತರ ಭಾರತದ ಆಸ್ಪತ್ರೆಯೊಂದರಲ್ಲಿ ದುರಂತ ಸಾವಿಗೀಡಾದ ಸುಮಾರು 35ಶಿಶುಗಳ ಸಾವು ವೈದ್ಯಲೋಕಕ್ಕೆ ಸವಾಲಾಗಿದೆ ಎಂದರು.
ಇಂಟರ್ ನ್ಯಾಷನಲ್ ಕಮಿಷನ್ ಆಫ್ ವೈರಲ್ ಟ್ಯಾಕ್ಸಾನಮಿ ಯುನೈಟೆಡ್ ಕಿಂಗ್ ಡಮ್ ಚೇರ್ ಮೆನ್ ಪ್ರೊ. ಡಾ.ರೋ ಡೇವಿಸನ್ ಉಪಸಸ್ಥಿತರಿದ್ದರು. ವೈ ರೊಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರೊ. ಡಾ. ಜಿ.ಪಿ.ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಟ್ಟೆ ವಿವಿ ಸಂಶೋಧನಾ ನಿರ್ದೇಶಕಿ, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಪ್ರೊ. ಡಾ. ಇಂದ್ರಾಣಿ ಕರುಣಾಸಾಗರ್ ವಂದಿಸಿದರು.
ಸಮ್ಮೇಳನ ಸಂಘಟಕ ಪ್ರೊ. ಡಾ. ಇಡ್ಯಾ ಕರುಣಾಸಾಗರ್ ಸ್ವಾಗತಿಸಿದರು.