×
Ad

ಯೆನೆಪೊಯದಲ್ಲಿ ಫ್ರೂಟ್ಸ್ ಮಿಕ್ಸಿಂಗ್ ಕಾರ್ಯಕ್ರಮ

Update: 2017-12-07 18:26 IST

ಉಳ್ಳಾಲ, ಡಿ. 7: ಯೆನೆಪೊಯ ಫುಡ್‌ಕ್ರಾಫ್ಟ್ ವತಿಯಿಂದ ಮತ್ತು ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸಹಯೋಗದೊಂದಿಗೆ 6ne ಪ್ರೂಟ್ಸ್ ಮಿಕ್ಸಿಂಗ್ ಕಾರ್ಯಕ್ರಮ ಯೆನೆಪೊಯ ಯುನಿವರ್ಸಿಟಿ ಆವರಣದ ರೈನ್ ಟ್ರಿ ಕ್ಯಾಂಟೀನ್‌ನಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಯೆನೆಪೊಯ ಸಂಸ್ಥೆಯ ನಿರ್ದೆಶಕರಾದ ಯೆನೆಪೊಯ ಮೊಯ್ದಿನ್ ಖುರ್ಷಿದ್ ಅವರು ಪ್ರೂಟ್ಸ್ ಮಿಕ್ಸಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಮತ್ತು ಯೆನೆಪೊಯ ಫುಡ್‌ಕ್ರಾಫ್ಟ್‌ನ ಜನರಲ್ ಮ್ಯಾನೇಜರ್ ಆಗಿರುವ ರವಿ ನಾರಾಯಣ ಖಂಡಿಗೆ ಅವರು ಸ್ವಾಗತಿಸಿದರು.

ಈ ಸಮಾರಂಭದಲ್ಲಿ ಯೆನೆಪೊಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಬಿ ಇ.ಸಿ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು, ಯೆನೆಪೊಯ ಫುಡ್‌ಕ್ರಾಫ್ಟ್‌ನ ಶೆಫ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಸಂದರ್ಭ  ಸುಮಾರು 10,000 ಕಿಲೋ ಫ್ಲಮ್ ಕೇಕ್ ಅನ್ನು  ತಯಾರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News