×
Ad

ರಾಷ್ಟ್ರೀಯತೆ-ಹಿಂದುತ್ವ ಬೇರೆಯಲ್ಲದಿದ್ದರೆ ಹಿಂದೂ ಅಲ್ಲದ ಅಂಬೇಡ್ಕರ್, ಅಬ್ದುಲ್ ಕಲಾಂ ಯಾರು?

Update: 2017-12-07 19:11 IST

ಬೆಂಗಳೂರು, ಡಿ.7: ರಾಷ್ಟ್ರೀಯತೆ ಹಾಗು ಹಿಂದುತ್ವ ಒಂದೇ ಎನ್ನುವ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಭಾಷಾ ನಟ ಪ್ರಕಾಶ್ ರೈ,  ರಾಷ್ಟ್ರದ ಹೆಮ್ಮೆಯಾದ ಅಬ್ದುಲ್ ಕಲಾಂ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವರು ಹಿಂದೂಗಳಲ್ಲ ಎಂದಿದ್ದಾರೆ.

ಹಿಂದುತ್ವ ಹಾಗು ರಾಷ್ಟ್ರೀಯತೆ ಒಂದೇ ಎಂದು ಅನಂತ್ ಕುಮಾರ್ ಹೆಗಡೆ ಹೇಳಿರುವ ವಿಡಿಯೋವನ್ನು ಪ್ರಕಾಶ್ ರೈ ಟ್ವೀಟ್ ಮಾಡಿದ್ದು, “ಪ್ರೀತಿಯ ಅನಂತ್ ಕುಮಾರ್ ಹೆಗಡೆ, ಹಿಂದುತ್ವ ಹಾಗು ರಾಷ್ಟ್ರೀಯತೆ ಬೇರೆ ಬೇರೆಯಲ್ಲ ಎಂದು ನೀವು ಹೇಳಿದ್ದೀರಿ. ರಾಷ್ಟ್ರೀಯತೆಗೆ ಧರ್ಮವನ್ನು ಯಾಕೆ ಎಳೆದು ತರುತ್ತೀರಿ. ಹಾಗಾದರೆ ಹಿಂದೂಗಳಲ್ಲದವರ ಬಗ್ಗೆ ನಿಮ್ಮ ಅಭಿಪ್ರಾಯವೇನು. ದೇಶದ ಹೆಮ್ಮೆಯಾದ ಅಂಬೇಡ್ಕರ್, ಅಬ್ದುಲ್ ಕಲಾಂ, ಎ.ಆರ್. ರಹಮಾನ್, ಖುಶ್ವಂತ್ ಸಿಂಗ್, ಅಮೃತಾ ಪ್ರೀತಂ, ಡಾ. ವರ್ಗೀಸ್ ಕುರಿಯನ್… ಪಟ್ಟಿ ಇನ್ನೂ ಇದೆ.. ಹಾಗು ಧರ್ಮವೇ ಇಲ್ಲ ನನ್ನಂತ ಹಲವರ ಬಗ್ಗೆ ನಿಮ್ಮ ಅಭಿಪ್ರಾಯವೇನು… ಆದರೆ ಮಾನವೀಯತೆಯಲ್ಲಿ ನಂಬಿಕೆಯಿರಲಿ.. ನಾವು ದೇಶದ ಪ್ರಜೆಗಳಲ್ಲವೇ.. ನೀವು ಯಾರು.. ನಿಮ್ಮ ಅಜೆಂಡಾ ಏನು.. ನಿಮಗೆ ‘ಜನ್ಮ’ಗಳಲ್ಲಿ ನಂಬಿಕೆ ಇರುವ ಕಾರಣ.. ನೀವು ಜರ್ಮನಿಯ ಹಿಟ್ಲರನ ಪುನರ್ಜನ್ಮವೇ .." ಎಂದು ಪ್ರಶ್ನಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನಂತ್ ಕುಮಾರ್ ಹೆಗಡೆ, “ಹಿಂದುತ್ವ ಮತ್ತು ರಾಷ್ಟ್ರೀಯತೆ ಪ್ರತ್ಯೇಕವಲ್ಲ. ನಾನು ರಾಷ್ಟ್ರೀಯತೆಯನ್ನು ಬಲವಾಗಿ ಪ್ರತಿಪಾದಿಸುತ್ತೇನೆ. ರಾಷ್ಟ್ರೀಯತೆಯಿಂದ ಹಿಂದುತ್ವವನ್ನು ಬೇರೆ ಮಾಡಬಾರದು” ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News