×
Ad

ಭಟ್ಕಳ: ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ 'ವಿಜ್ಞಾನ ಪ್ರತಿಭಾನ್ವೇಷಣೆ-2017'

Update: 2017-12-07 22:40 IST

ಭಟ್ಕಳ, ಡಿ. 7: ವಿದ್ಯಾರ್ಥಿಗಳು ವಿಜ್ಞಾನವನ್ನು ಕೇವಲ ಪರೀಕ್ಷೆಗಾಗಿ ಓದದೇ ವೈಜ್ಞಾನಿಕ ಚಿಂತನೆಯಿಂದ ಹೊಸ ಆವಿಷ್ಕಾರಕ್ಕೆ ತೆರೆದುಕೊಳ್ಳಬೇಕೆಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಯಲ್ಲಮ್ಮ ಹೇಳಿದರು.

ಅವರು ಭಾರತ ವಿಕಾಸ ಪರಿಷತ್ತಿನ ಚೆನ್ನಭೈರಾದೇವಿ ಶಾಖೆ, ಭಟ್ಕಳ, ದಿ ನ್ಯೂ ಇಂಗ್ಲೀಷ ಪಿಯು ಕಾಲೇಜು, ಭಟ್ಕಳ ಮತ್ತು ಕ್ಷೇತ್ರ ಶಿಕ್ಷಣಾಧೀಕಾರಿಗಳ ಕಾರ್ಯಾಲಯ, ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿಜ್ಞಾನ ಪ್ರತಿಭಾನ್ವೇಷಣೆ-2017 ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

24 ಪ್ರೌಢಶಾಲೆಗಳು ಭಾಗವಹಿಸಿದ ಈ ಸ್ಫರ್ಧೆಯಲ್ಲಿ ಮುರ್ಡೇಶ್ವರದ ಆರ್ ಎನ್ ಎಸ್ ವಿದ್ಯಾನಿಕೇತನ ಪ್ರಥಮ ಸ್ಥಾನ, ಸರ್ಕಾರಿ ಪ್ರೌಢಶಾಲೆ ಬೆಳ್ಕೆ ದ್ವಿತೀಯ ಸ್ಥಾನ ಮತ್ತು ನ್ಯೂ ಇಂಗ್ಲೀಷ ಪ್ರೌಢಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಭಾಗವಹಿಸಿದ ವಿದ್ಯಾರ್ಥಿಗಳ ಪರವಾಗಿ ರಂಜಿತಾ ಹೆಗಡೆ, ದೀಪಾಲಿ ನಾಯ್ಕ, ಅಭಿಷೇಕ ನಾಯ್ಕ ಮತ್ತು ಶಿಕ್ಷಕರಾದ ಸಂತೋಷ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ವಿಜ್ಞಾನ ಮತ್ತು ಗಣಿತ ವಿಷಂಗಳು ಕಬ್ಬಿಣದ ಕಡಲೆ ಎನ್ನುವ ಭಾವನೆಯನ್ನು ಹೊಂದಿದ್ದ ನಮಗೆ ಈ ಒಂದು ಕಾರ್ಯಗಾರ ಅತ್ಯಂತ ಸಹಕಾರಿಯಾಯಿತು ಎಂದು ಹೇಳಿದರು.

ಈ ವೈಜ್ಞಾನಿಕ ಕಾರ್ಯಕ್ರಮವನ್ನು ರಾಸಾಯನಿಕವನ್ನು ಬಳಸಿ ದೀಪ ಬೆಳಗುವಂತೆ ಮಾಡಿರುವುದು ಮತ್ತು ರೋಬೋಟನ್ನು ಬಳಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಅತ್ಯಂತ ಪ್ರಶಂಸೆಗೆ ಕಾರಣವಾಯಿತು.

ಕಾರ್ಯಕ್ರಮದಲ್ಲಿ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನರಸಂಹ ಮೂರ್ತಿ, ಶಿರಾಲಿಯ ಸೇಂಟ ಥೋಮಸ್ ಶಾಲೆಯ ಪ್ರಾಂಶುಪಾಲ ಸಾಮ್ಯುಲ್ ವರ್ಗಿಸ್, ಸರ್ಕಾರಿ ಪ್ರೌಢಶಾಲೆ ಗೊರಟೆಯ ಮುಖ್ಯೋಧ್ಯಾಪಕ ಶ್ರೀ ರಾಘವೇಂದ್ರ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ, ಕ್ಷೇತ್ರ ಶಿಕ್ಷಣಾಧೀಕಾರಿಗಳ ಕಾರ್ಯಾಲಯದ ಶ್ಯೆಕ್ಷಣಿಕ ಸಂಯೋಜಕ ಎಸ್ ಪಿ ಭಟ್ , ಶೈಕ್ಷಣಿಕ ಸಲಹೆಗಾರ ಶ್ರೀ ಬಿ ಆರ್ ಕೆ ಮೂರ್ತಿ, ಈ ಸ್ಪರ್ಧಾ ಕಾರ್ಯಕ್ರಮದ ಸಂಯೋಜಕ ಶಿವಪ್ಪ ಯತ್ತಿನಹಳ್ಳಿ ಉಪಸ್ಥಿತರಿದ್ದರು. ಪ್ರಾಂಶುಪಾಲ ವಿರೇಂದ್ರ ಶ್ಯಾನಭಾಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ನಾಗಲಕ್ಷ್ಮಿ ಮತ್ತು ಭಾರತ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಪ್ರಕಾಶ ಶಿರಾಲಿ ವಂದನಾರ್ಪಣೆ ಮಾಡಿದರು. ಉಪನ್ಯಾಸಕಿ ಉಷಾ ಬಾಯಿ, ಲೋಲಿಟಾ ರೊಡ್ರಿಗಸ್ ಮತ್ತು ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News