×
Ad

ಕೋಮವಾದಿಗಳು ಅಧಿಕಾರಕ್ಕೆ ಬರಲೇ ಬಾರದು : ಸಿದ್ದರಾಮಯ್ಯ

Update: 2017-12-07 22:51 IST

ಮುಂಡಗೋಡ, ಡಿ. 7:  ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ರಾಜ್ಯ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ  ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡಿಸಲಿ ನೋಡೊಣ. ಮೋದಿ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಒಂದೆ ಒಂದು ಕೆಲಸವು ಮಾಡಲು ಆಗಿಲ್ಲಾ ಮೋದಿ ಒಬ್ಬ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಿ ಹೇಳಿದರು.

ಯಲ್ಲಾಪುರ ವಿಧಾನಸಬಾ ಕ್ಷೇತ್ರದ ವಿವಿಧ ಇಲಾಖೆಯ 300 ಕೋಟಿ ರೂಪಾಯಿ ಅನುದಾನದ 131 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿ ಮಾತನಾಡಿದ ಅವರು ಒಟ್ಟು ಉತ್ತರ ಕನ್ನಡ ಜಿಲ್ಲೆಗೆ 3500 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅವರು ಗುರುವಾರ ಯಲ್ಲಾಪುರ ಕ್ಷೇತ್ರದ ಮುಂಡಗೋಡ ತಾಲೂಕಿನಲ್ಲಿ 300 ಕೋಟಿರೂ ಗಳ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮಾಡಿ ಮಾತನಾಡಿದರು

ಭಟ್ಕಳದಲ್ಲಿ 1200 ಕೋಟಿ, ಕುಮಟಾ 300 ಕೋಟಿ, ಕಾರವಾರದಲ್ಲಿ 900 ಕೋಟಿ,ಶಿರಸಿ 150 ಕೋಟಿ, ಮುಂಡಗೋಡ ದಲ್ಲಿ 300 ಕೋಟಿ, ಹಳಿಯಾ 3500 ಕೋಟಿ ಉತ್ತರಕನ್ನಡ ಜಿಲ್ಲೆಯಲ್ಲಿ ಶಿಲಾನ್ಯಾಸ ಹಾಗೂ ಕಾಮಗಾರಿಗಳ ಉದ್ಘಾಟನೆ ಮಾಡಿವೆ ಎಂದರೆ ರಾಜ್ಯದಲ್ಲಿ ಯಾವರೀತಿ ಕೆಲಸ ನಡೆಯುತ್ತಿದೆ ಎಂದು ತೋರಿಸಿಕೊಡುತ್ತಿದೆ

ಅಂದರೆ ರಾಜ್ಯದಲ್ಲಿ ಯಾವಮಟ್ಟಕ್ಕೆ ಕೆಲಸ ಮಾಡುತ್ತಿದ್ದೆವೆ ಎಂದು ತಿಳಿಯುತ್ತೆ. ಯಲ್ಲಾಪೂರ ಕ್ಷೇತ್ರದಲ್ಲಿ ಸರ್ಕಾರದ ಅನೇಕ ಅಭಿವೃದ್ದಿ ಕಾಮಗಾರಿಗಳು ಸಾರ್ವಜನಿಕರ ಮನೆ ಮುಟ್ಟಬೇಕಾದರೆ ಶಾಸಕ ಶಿವರಾಮ ಹೆಬ್ಬಾರರ ಪಾತ್ರ ಹೆಚ್ಚಿದೆ ಶಿವರಾಮ ಹೆಬ್ಬಾರ ಜನಪರ ಕಾಳಜಿ ಇರುವಂತ ಒಬ್ಬ ಕ್ರೀಯಾಶಿಲ ಶಾಸಕ ಹೆಬ್ಬಾರ ಯಾವಾಗಲು ಕ್ಷೇತ್ರದ ಅಭಿವೃದ್ದಿ ಕೆಲಸ ಮಾಡಿಸುವುದರಲ್ಲಿ ಮುಂಚುಣಿಯಲ್ಲಿರುತ್ತಾರೆ. ಅವರೊಬ್ಬ ಶುದ್ಧ ವಜ್ರ ಎಂದರು ನನಗೆ ಭೇಟಿ ಆಗಲು ಬಂದಾಗೊಮ್ಮೆ ಯಾವುದಾದರು ಒಂದು ಅಭಿವೃದ್ದಿ ಕಾಮಗಾರಿಯ ಪತ್ರ ತಂದಿರುತ್ತಾರೆ.

ಕ್ಷೇತ್ರದ 129 ಕೆರೆಗಳನ್ನು ಬೇಡ್ತಿ ನದಿಯಿಂದ ತುಂಬಿಸುವಂತ ಯೋಜನೆಯ ಡಿ.ಪಿ.ಆರ್ ಆಗಿದೆ. ನಿಗಮದ ಮುಂದಿಯೂ ಬಂದಿದೆ ಕ್ಯಾಬಿನೇಟ್ ಮುಂದೆ ಬರಬೇಕು ಎಂದರು. ಈ ಕಾರ್ಯವನ್ನು ಮಾಡಲಾಗುವುದು ಮುಂದಿನ ಸಾರಿ ಯಲ್ಲಾಪುರ ಕ್ಷೇತ್ರಕ್ಕೆ ಶಿಲಾನ್ಯಾಸ ಮಾಡಲು ಬರುತ್ತೇನೆ ಎಂದರು.
 ಕರ್ನಾಟಕದ ಇತಿಹಾಸದಲ್ಲಿ ನುಡಿದಂತೆ ನಡೆದಿದ್ದೇವೆ ಎಂದರೆ ಅದು ನಮ್ಮ ಸರಕಾರ ಸರಕಾರ ಘೋಷಿಸಿದ ಎಲ್ಲ ಜನಪರ ಅಭಿವೃದ್ದಿ ಕೆಲಸ ಮಾಡುವ ಶಾಸಕ ಶಿವರಾಮ ಹೆಬ್ಬಾರ ಶುದ್ದ ವಜ್ರ ಎಂದರು. ಅವರು ಜನಪರ ಅಭಿವೃದ್ದಿ ಕಾರ್ಯಗಳನ್ನು ಮಾಡುವಂತ ಎಂದು ಸಾಬಿತಾಗಿದೆ ಎಂದರು

ನಮ್ಮ ಸರಕಾರ ನೀರಾವರಿಗೆ ಹೆಚ್ಚಿನ ಒತ್ತುಕೊಟ್ಟಿದೆ. 16 ವರ್ಷಗಳಲ್ಲಿ 13 ವರ್ಷಗಳು ಬರಗಾಲ ರಾಜ್ಯದ ಅನೇಕ ಕೆರೆಗಳನ್ನು ತುಂಬಿಸುವಂತ ಕಾರ್ಯವನ್ನು ಮಾಡಿದ್ದೇವೆ. ಜನರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ಬಿಜೆಪಿ ಪರಿವರ್ತಾನ ಯಾತ್ರಾ ಮಾಡುತ್ತಾರೆ, ಜೆಡಿಎಸ್ ವಿಕಾಸ ಯಾತ್ರೆ.
ಬಿಜೆಪಿಯವರು ಯಾರನ್ನು ಪರಿವರ್ತಾನೆ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತಿಲ್ಲಾ ಜನರನ್ನು ಪರಿವರ್ತನೆ ಮಾಡುವಂತ ಪರಿವರ್ತಾನಾ ಯಾತ್ರೆ ಹಮ್ಮಿಕೊಂಡಿದೆ ಜನರು ಈಗಾಗಲೇ ಪರಿವರ್ತನೆಯಾಗಿದ್ದಾರೆ. ಪರಿವರ್ತನೆ ಯಾಗಬೇಕಾದವರು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲದವರು ಸಂವಿಧಾನ ದಲ್ಲಿ ವಿಶ್ವಾಸವಿಲ್ಲದವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಪರಿವರ್ತನೆ ಯಾಗಬೇಕಾಗಿದೆ ಎಂದರು.

ಮೋದಿ ತಂತ್ರಗಾರಿಕೆ ನಡೆಯಲ್ಲಾ. ಮೋದಿಯವರ ಮಾತುಗಳು ಕರ್ನಾಟಕದ ಜನರ ಪರಿಣಾಮ ಬಿರಲ್ಲ ಎಂದರು. ಜಾತ್ಯಾತೀತ ದಲ್ಲಿ ಸರ್ವಧರ್ಮ ಸಮನ್ವಯದಲ್ಲಿ ನಂಬಿಕೆ ಇಟ್ಟ ನಮ್ಮ ಜನರು ಕೋಮುವಾದಿಗಳ ಮಾತಿಗೆ ಮರಳಾಗುವುದಿಲ್ಲಕನ್ನಡನಾಡು ಬಸವಣ್ಣರ ನಾಡು ಕನಕದಾಸರ ನಾಡು ಕುವಂಪುರ ಶಿಶುನಾಳ ಶರೀಫರ ನಾಡು ಸಂತರು ಶರಣರು ಮಹಾತ್ಮರು ಜ್ಯಾತ್ಯಾತೀತ ತತ್ವದ ಬೀಜಗಳನ್ನು ಹಾಕಿದ್ದಾರೆ. ಕೋಮುವಾದಿಗಳನ್ನು ನಮ್ಮ ಜನರು ಎಂದು ಸಹಿಸುವುದಿಲ್ಲ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹೇಗೆ ಹುಟ್ಟುವುದು ಸತ್ಯವೋ ಹಾಗೆ 2018 ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತದೆ. ಸಮಾಜದಲ್ಲಿ ಶಾಂತಿ ಸಹಬಾಳ್ವೆ ಇರಬೇಕಾದರೆ ಕೊಮುವಾದಿಗಳು ಅಧಿಕಾರಕ್ಕೆ ಬರಲೇ ಬರಬಾರದು. 2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನಪರ ಅಭಿವೃದ್ದಿದಲಿತರಿಗೆ, ಹಿಂದುಳಿದ ಜನಾಂಗದವರಿಗೆ , ಅಲ್ಪಸಂಖ್ಯಾತರಿಗೆ ಮಹಿಳೆ ಏನು ಮಾಡಲಿಲ್ಲ. ಅಧಿಕಾರದಲ್ಲಿ ಇದ್ದಾಗ ನೆನಪಾಗದ ದಲಿತರ ನೋವು ಈಗ ಬಹಳ ಚಿಂತೆ ಯಾಗುತ್ತಿದೆ. ಬಿಜೆಪಿಯವರ ನಡಿಗೆ ದಲಿತರ ಕಡೆಗೆ ಎಂದು ಅವರ ಮನೆಯಲ್ಲಿ ಊಟ ಮಾಡುತ್ತೇವೆ ಎಂದು ಹೊಟಲ್ ತಿಂಡಿ ತಿಂದಿದ್ದಾರೆ ನಾಟಕ ವಾಡುವುದು ಬೀಡಿ ಯಡ್ಯೂರಪ್ಪನವರೆ ಎಂದರು. 

ದಲಿತರ ಪರವಾಗಿ ನ್ಯಾಯಾ ಕೊಡುವಂತ ಸಮಾಜಿಕ ಆರ್ಥಿಕ ಶಕ್ತಿ ಬರವಂತ ಕಾರ್ಯಕ್ರಮ ನೀಡಿದ್ದರೆ ಅದು ನಮ್ಮ ಸರ್ಕಾರ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಮ್ಮ ಸರಕಾರದಲ್ಲಿ 86 ಸಾವಿರ ಕೋಟಿ ರು ಖರ್ಚು ಮಾಡಿದ್ದೇವೆ. ಬಿಜೆಪಿಯವರು ಮಾಡಿದ್ದು ಕೇವಲ 21 ಸಾವಿರ ಕೋಟಿ ಎಂದರು. ಪಿಡ್ಬ್ಯೂಡಿ. ನೀರವಾರಿ ಇಲಾಖೆ ಮತ್ತಿತರ ಇಲಾಖೆಗಳಲ್ಲಿ ಕಾಂಟ್ರಾಕ್ಟ ದಲಿತರಿಗೆ ಮಿಸಿಲು ಎಂದು ಕಾನೂನ ಮಾಡಿದ್ದು ನಾವು.
ಹಕ್ಕು ಪತ್ರ ಇಲ್ಲದೆ ವಾಸಿಸುತ್ತಿದ್ದ ಲಂಬಾಣಿ ತಾಂಡಗಳಿಗೆ ಗೌಳಿ ದಡ್ಡಿಗಳಿಗೆ ಹಕ್ಕು ಪತ್ರ ನೀಡಿ ವಾಸಿಸುವವೇ ಮನೆ ಒಡೆಯ ಎಂದು ಸಾರಿದ್ದು ನಾವೇ ಎಂದರು. 

ಮೋದಿಯವರು ಅಧಿಕಾರಕ್ಕೆ ಬಂದಾಗ ವಿದೇಶದಿಂದ ಕಪ್ಪು ಹಣವನ್ನು ತಂದು ಎಲ್ಲರ ಅಕೌಂಟನಲ್ಲಿ 15 ಲಕ್ಷ ಹಾಕುತ್ತೇನೆ ಎಂದವರು 15 ಪೈಸೆನೂ ಹಾಕಿಲ್ಲ. ಎಂದರು ಕಾಳಧನಿಕರ ಪಾಠ ಕಲಿಸಲೇಂದು ದೊಡ್ಡ ಮುಖ ಬೆಲೆಯ ನೋಟುಗಳನ್ನು ಅಮಾನ್ಯಕರಣ ಮಾಡಿ ಬಡಜನರಿಗೆ ನೋವು ಕೊಟ್ಟರು. ಇವರ ಅಮಾನ್ಯಕರಣದಿಂದ ಯಾವ ಕಾಳಧನಿಕನಿಗೆ ನೋವಾಗಿಲ್ಲಾ ಎಂದರು

ಉತ್ತರಕನ್ನಡ ಲೋಕಸಭಾ ಸದಸ್ಯ ಅನಂತಕುಮಾರ ಮಂತ್ರಿ ಯಾಗುವುದಕ್ಕೆ ನಾಲಾಯಾಕ್ ಎಂದರು. ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು.

ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷ ಜಯಶ್ರೀ, ಜಿ.ಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಚಂದ್ರಶೇಖರ, ಅಪರ್ ಜಿಲ್ಲಾಧಿಕಾರಿ ಪ್ರಸನ್ನ, ಭಟ್ಕಳ ಶಾಸಕ ಮಂಕಾಳು ವೈದ್ಯ, ಕಾರವಾರ ಶಾಸಕ ಸತೀಶ ಸೈಲ್ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ ಸೇರಿದಂತೆ ಮುಂತಾದವರು ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News