ಪಶ್ಚಿಮ ದಂಡೆಯಲ್ಲಿ ಹೆಚ್ಚಿನ ಸೈನಿಕರ ನಿಯೋಜನೆ: ಇಸ್ರೇಲ್

Update: 2017-12-07 17:38 GMT

ಜೆರುಸಲೇಂ, ಡಿ. 7: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕದ ಕ್ರಮದ ವಿರುದ್ಧ ಫೆಲೆಸ್ತೀನೀಯರು ಪ್ರತಿಭಟನೆ ಆರಂಭಿಸಿರುವಂತೆಯೇ, ಆಕ್ರಮಿತ ಪಶ್ಚಿಮ ದಂಡೆಗೆ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿರುವುದಾಗಿ ಇಸ್ರೇಲ್ ಸೇನೆ ಗುರುವಾರ ತಿಳಿಸಿದೆ.

ಹಲವಾರು ನೂತನ ಸೇನಾ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗುವುದು ಹಾಗೂ ಇತರ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗುವುದು ಎಂದು ಹೇಳಿಕೆಯೊಂದರಲ್ಲಿ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News