×
Ad

ಕರಾವಳಿ ಉತ್ಸವ: ಯುವಜನೋತ್ಸವ-ಸಾಂಸ್ಕೃತಿಕ ಸ್ಪರ್ಧೆ

Update: 2017-12-07 23:09 IST

ಮಂಗಳೂರು, ಡಿ.7: ಡಿ.23 ರಿಂದ ನಡೆಯಲಿರುವ ಕರಾವಳಿ ಉತ್ಸವ ಅಂಗವಾಗಿ ‘ಕರಾವಳಿ ಯುವಜನೋತ್ಸವ’ ಆಯೋಜಿಸಲಾಗಿದೆ. ಯುವಜನೋತ್ಸವವು ಡಿ.28 ಹಾಗೂ 29 ರಂದು ಕದ್ರಿ ಉದ್ಯಾನವನದಲ್ಲಿನ ತೆರೆದ ರಂಗಮಂದಿರದಲ್ಲಿ ನಡೆಯಲಿದೆ.

ಕರಾವಳಿ ಯುವಜನೋತ್ಸವ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ನೃತ್ಯ, ಗಾಯನ, ವಾದ್ಯ, ಸಂಗೀತ, ಏಕಪಾತ್ರಭಿನಯ, ಮೂಕಾಭಿನಯ(ಮೈಮ್), ಯಕ್ಷ ಯುಗಳಗೀತೆ, ಕಿರುನಾಟಕ, ಚರ್ಚಾ ಸ್ಪರ್ಧೆ ಮತ್ತು ಸಾಂಪ್ರದಾಯಿಕ ಉಡುಗೆ ತೊಡುಗೆ ಪ್ರದರ್ಶನ (ಫ್ಯಾಶನ್ ಶೋ) ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.ಸ್ಪರ್ಧೆಗಳ ಆಡಿಷನ್: ನೃತ್ಯ, ಕಿರುನಾಟಕ, ಏಕಪಾತ್ರಭಿನಯ, ಮೂಕಾಭಿನಯ(ಮೈಮ್), ಯಕ್ಷ ಯುಗಳಗೀತೆ ಹಾಗೂ ಸಾಂಪ್ರಾದಾಯಿಕ ಉಡುಗೆ ತೊಡುಗೆ (ಫ್ಯಾಶನ್ ಶೋ) ಪ್ರದರ್ಶನ ಸ್ಪರ್ಧೆಗಳು ಪುರಭವನದಲ್ಲಿ ಡಿ.15 ರಂದು ಬೆಳಗ್ಗೆ 9 ಗಂಟೆಯಿಂದ ಆಯ್ಕೆ ಆವೃತ್ತಿ ನಡೆಯಲಿದೆ.

ಗಾಯನ, ವಾದ್ಯ ಸಂಗೀತ ಸಂಬಂಧಿಸಿದ ಸ್ಪರ್ಧೆಗಳಿಗೆ ಆಯ್ಕೆ ಆವೃತ್ತಿ ಡಿ. 16 ರಂದು ಬೆಳಗ್ಗೆ 9 ಗಂಟೆಯಿಂದ ಕಾರ್‌ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಗುವುದು.

ಮೂಡಬಿದ್ರೆ, ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಭಾಗಳಿಂದ ಕನಿಷ್ಠ 3 ತಂಡಗಳನ್ನು ಆಡಿಷನ್‌ಗಾಗಿ ಆಯಾ ತಾಲೂಕಿನ ಲೀಡ್ ಕಾಲೇಜುಗಳ ಮೂಲಕ ಆಯ್ಕೆ ನಡೆಯಲಿದೆ. ಕಾಲೇಜುಗಳ ತಂಡಗಳು ಡಿ.13ರ ಒಳಗಾಗಿ ಯುವಜನೋತ್ಸವ ಕಾರ್ಯಕ್ರಮದ ನೋಡಲ್ ಕಾಲೇಜು ಆಗಿರುವ ಕಾರ್‌ಸ್ಟ್ರೀಟ್‌ನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಮೇಲ್ gfgcmcevents@gmail.comಗೆ ವಿವರ ಕಳುಹಿಸಿ ನೋಂದಾಯಿಸಬೇಕು, ಆಡಿಷನ್‌ನಲ್ಲಿ ಆಯ್ಕೆಗೊಂಡ ಸ್ಪರ್ಧಿಗಳು ಡಿ.28 ಮತ್ತು 29ರಂದು ಕದ್ರಿ ಉದ್ಯಾನವನದಲ್ಲಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆಯುವ ತಂಡಗಳಿಗೆ ಮತ್ತು ವೈಯಕ್ತಿಕ ಪ್ರತಿಭೆಗಳಿಗೆ ನಗದು ಬಹುಮಾನಗಳು ಹಾಗೂ ಅತ್ಯುತ್ತಮ ಕರಾವಳಿ ಯುವ ಉತ್ಸವ ಪ್ರತಿಭೆ- ಯುವಕ ಮತ್ತು ಯುವತಿ ಪ್ರಶಸ್ತಿಗಳನ್ನು ನೀಡಲಾಗುವುದು.

ಕದ್ರಿ ಉದ್ಯಾನವನದಲ್ಲಿನ ತೆರೆದ ರಂಗಮಂದಿರದಲ್ಲಿ ಡಿ.28ರ ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಡಿ.29 ರ ಸಂಜೆ 9 ಗಂಟೆಗೆ ಸಮಾರೋಪ ಕಾರ್ಯಕ್ರವನ್ನು ಹ್ಮುಕೊಳ್ಳಲಾಗಿದ್ದು, ಎಲ್ಲಾ ಬಹುಮಾನಗಳನ್ನು ಮತ್ತು ಪ್ರಶಸ್ತಿಗಳನ್ನು ಸಮಾರೋಪ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News