ಯುದ್ಧ ಅನಿವಾರ್ಯ: ಉತ್ತರ ಕೊರಿಯ ಎಚ್ಚರಿಕೆ

Update: 2017-12-07 17:44 GMT

ಸಿಯೋಲ್, ಡಿ. 7: ಅಮೆರಿಕ ಮತ್ತು ದಕ್ಷಿಣ ಕೊರಿಯಗಳ ನಡುವಿನ ಜಂಟಿ ಸಮರಾಭ್ಯಾಸವು, ಯುದ್ಧವನ್ನು ಅನಿವಾರ್ಯಗೊಳಿಸಿದೆ ಎಂದು ಉತ್ತರ ಕೊರಿಯ ಗುರುವಾರ ಎಚ್ಚರಿಸಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಗಳ ನಡುವಿನ ಜಂಟಿ ಸಮರಾಭ್ಯಾಸದಲ್ಲಿ 230 ಯುದ್ಧ ವಿಮಾನಗಳು ಪಾಲ್ಗೊಂಡಿವೆ. ಆ ಪೈಕಿ ಅಮೆರಿಕದ ಅತ್ಯಾಧುನಿಕ ಅದೃಶ್ಯ ವಿಮಾನಗಳೂ ಇವೆ.

ಉತ್ತರ ಕೊರಿಯವು ತನ್ನ ಅತ್ಯಂತ ಶಕ್ತಿಶಾಲಿ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ (ಐಸಿಬಿಎಂ)ಯನ್ನು ಹಾರಿಸಿದ ಒಂದು ವಾರದ ಬಳಿಕ ಅಮೆರಿಕ ಮತ್ತು ದಕ್ಷಿಣ ಕೊರಿಯಗಳ ಯುದ್ಧಾಭ್ಯಾಸ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News