×
Ad

ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

Update: 2017-12-07 23:24 IST

ಮಂಗಳೂರು, ಡಿ. 7: ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಕಾಯರ್‌ಪುಂಡು ಎಂಬಲ್ಲಿ ರತ್ನ ಎಂಬವರ ಮನೆಯ ಮಾಡಿನ ಹೆಂಚು ತೆಗೆದು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮೂಡಬಿದ್ರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಡಮಿಜಾರು ಗ್ರಾಮದ ಅಶ್ವಥಪುರ ಗುಂಡೆಬೆಟ್ಟು ನಿವಾಸಿ ಅಶೋಕ (42) ಬಂಧಿತ ಆರೋಪಿ. ಈತಕಳವು ಮಾಡಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮೂಡಬಿದ್ರೆ ಠಾಣಾ ನಿರೀಕ್ಷಕ ರಾಮಚಂದ್ರ ನಾಯಕ್, ಪಿಎಸ್‌ಐ ಶಂಕರ ನಾಯರಿ ಮತ್ತು ಸಿಬ್ಬಂದಿಯವರಾದ ರಾಜೇಶ್, ಅಖಿಲ್ ಅಹ್ಮದ್, ಸುಜನ್ ಮತ್ತು ಚಂದ್ರಹಾಸ ರೈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News