×
Ad

ಕೊಂಕಣ ರೈಲಿನಲ್ಲಿ ಅಕ್ರಮ ಮದ್ಯ ವಶ

Update: 2017-12-07 23:25 IST

ಉಡುಪಿ, ಡಿ.7: ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಮತ್ಸಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ನಡೆಸಿದ ವಿಶೇಷ ತಪಾಸಣೆಯ ವೇಳೆ ಅಕ್ರಮ ವಾಗಿ ಸಾಗಿಸಲಾಗುತಿದ್ದ ಅಕ್ರಮ ಮದ್ಯದ ಬಾಟಲುಗಳು ಪತ್ತೆಯಾಗಿವೆ.

ರೈಲ್ವೆ ಪೊಲೀಸ್ ಪಡೆ ನಿನ್ನೆ ಭಟ್ಕಳ ರೈಲು ನಿಲ್ದಾಣದಲ್ಲಿ ಮತ್ಸಗಂಧ ರೈಲಿನಲ್ಲಿ ವಿಶೇಷ ರೈಲು ತಪಾಸಣೆ ನಡೆಸುವ ವೇಳೆ ಸಾಮಾನ್ಯ ಡಬ್ಪಿಯಲ್ಲಿ ವಾರಸುದಾರ ರಿಲ್ಲದ ಗೋಣಿಚೀಲದಲ್ಲಿ ಅಕ್ರಮ ಮದ್ಯಗಳು ಪತ್ತೆಯಾದವು. ಇದರಲ್ಲಿ 750 ಎಂಎಲ್ ಹನಿ ಗೈಡ್ ಬ್ರಾಂಡಿ 218 ಬಾಟಲಿ, ಹಾಗೂ 180 ಎಂಎಲ್ ಹನಿ ಗ್ರೇಡ್/ಹನಿ ಗೈಡ್ ಬ್ರಾಂಡಿ 816 ಬಾಟಲಿಗಳು ಪತ್ತೆಯಾದವು. ಇವುಗಳ ಅಂದಾಜು ವೌಲ್ಯ 1,19,256 ರೂ. ಎನ್ನಲಾಗಿದೆ.

ರೈಲ್ವೆ ಪೊಲೀಸರು ಈ ಅಕ್ರಮ ಮದ್ಯವನ್ನು ಭಟ್ಕಳದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅವರು ತನಿಖೆ ನಡೆಸುತಿದ್ದಾರೆ ಎಂದು ಕೊಂಕಣ ರೈಲ್ವೆ ಕಾರವಾರ ಸಾರ್ವಜನಿಕ ಸಂಪರ್ಕ ಅಧಿಕಾರಿ ದಿಲೀಪ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News