ಡಿ.10: ತೊಕ್ಕೊಟ್ಟಿನಲ್ಲಿ ‘ಹಾಜಿ ಗೋಲ್ಡ್’ ಶುಭಾರಂಭ
ಮಂಗಳೂರು, ಡಿ.8: ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಎಂಜೆಎಸ್ ಕಮರ್ಷಿಯಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ಡಿ.10ರಂದು ಬೆಳಗ್ಗೆ 10:30ಕ್ಕೆ ‘ಹಾಜಿ ಗೋಲ್ಡ್’ ಶುಭಾರಂಭಗೊಳ್ಳಲಿದೆ.
ಸಚಿವ ಯು.ಟಿ.ಖಾದರ್ ‘ಹಾಜಿ ಗೋಲ್ಡ್’ ಉದ್ಘಾಟಿಸಲಿದ್ದು, ಹಿರಿಯ ಧಾರ್ಮಿಕ ವಿದ್ವಾಂಸ ಹಾಜಿ ಮಿತ್ತಬೈಲ್ ಜಬ್ಬಾರ್ ಮುಸ್ಲಿಯಾರ್ ದುಆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜುವೆಲ್ಲರ್ಸ್ ಫೆಡರೇಶನ್‌ನ ಅಧ್ಯಕ್ಷ ಜಯ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ. ರಾಮಾಚಾರಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಜಿ ಎನ್.ಎಸ್.ಕರೀಂ, ಕಾರ್ಪೊರೇಶನ್ ಬ್ಯಾಂಕ್‌ನ ತೊಕ್ಕೊಟ್ಟು ಶಾಖೆಯ ಮ್ಯಾನೇಜರ್ ಕೇಶವ ಜೆ., ತೊಕ್ಕೊಟ್ಟು ಸದರ್ ಬಝಾರ್ ಹಾಜಿ ಅಹ್ಮದ್ ಬಾವಾ, ದ.ಕ. ಜಿಪಂ ಸದಸ್ಯ ಸತೀಶ್ ಕುಂಪಲ, ಸೈಯದ್ ಮದನಿ ಜೂನಿಯರ್ ಕಾಲೇಜಿನ ಉಪಾಧ್ಯಕ್ಷ ಯು. ಇಬ್ರಾಹೀಂ ಕಾಸಿಂ, ಎಂಜೆಎಸ್ ಕಮರ್ಷಿಯಲ್ ಸಿಟಿ ಕಾಂಪ್ಲೆಕ್ಸ್‌ನ ಮುಹಮ್ಮದ್ ಹನೀಫ್, ತಲಪಾಡಿಯ ಫಲಾಹ್ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ಕೆ.ಪಿ. ಇಸ್ಮಾಯೀಲ್ ನಾಗತೋಟ ಭಾಗವಹಿಸಲಿದ್ದಾರೆ.
► ಪರಿಶುದ್ಧತೆ, ಗುಣಮಟ್ಟ, ಗ್ರಾಹಕ ಸ್ನೇಹಿಗೆ ಹೆಸರುವಾಸಿಯಾದ ‘ಹಾಜಿ ಗೋಲ್ಡ್’ನಲ್ಲಿ ಚಿನ್ನ, ವಜ್ರ, ಜೆಮ್ಸ್, ಪ್ಲಾಟಿನಂ, ಸಿಲ್‌ವರ್, ಲಕ್ಸುರಿ ಮೊಬೈಲ್, ವಾಚ್ ಇತ್ಯಾದಿ ಲಭ್ಯವಿದೆ. ಕಲ್ಕತ್ತಾ, ರಾಜ್‌ಕೋಟ್, ಮುಂಬೈ, ಆ್ಯಂಟಿಕ್, ಚಕ್ರಿ, ಪೂಲ್ಕಿ ಬ್ರಾಂಡ್‌ಗಳಲ್ಲದೆ, ಕೇರಳದ ನುರಿತ ಸ್ವರ್ಣ ಶಿಲ್ಪಿಗಳಿಂದ ತಯಾರಿಸಲ್ಪಟ್ಟ ಆಭರಣಗಳಿವೆ.
► ‘ಹಾಜಿ ಗೋಲ್ಡ್’ನ ಶುಭಾರಂಭದ ಪ್ರಯುಕ್ತ ಪ್ರತೀ ಐದು ಸಾವಿರ ರೂ.ಗಿಂತ ಮೇಲ್ಪಟ್ಟ ಖರೀದಿಗೆ ಕೂಪನ್ ನೀಡಲಾಗುವುದು. 2018ರ ಮಾರ್ಚ್ 30ರವರೆಗೆ ಖರೀದಿಸುವ ಗ್ರಾಹಕರಿಗೆ ಈ ಕೂಪನ್ ದೊರಕಲಿದ್ದು, ಅಂದೇ ಕೂಪನ್‌ನ ಡ್ರಾ ಮಾಡಲಾಗುವುದು. ಅದೃಷ್ಟಶಾಲಿಗಳಿಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ದ್ವಿತೀಯ ಬಹುಮಾನವಾಗಿ 50 ಸಾವಿರ ರೂ. ಮೌಲ್ಯದ ವಜ್ರಾಭರಣ, ತೃತೀಯ ಬಹುಮಾನವಾಗಿ 25 ಸಾವಿರ ರೂ. ಮೌಲ್ಯದ ‘ಟಿಸ್ಸೋಟ್ ವಾಚ್’ ಗೆಲ್ಲುವ ಅವಕಾಶವಿದೆ.
► ಅದಲ್ಲದೆ ಪ್ರಥಮ ಒಂದು ತಿಂಗಳಲ್ಲಿ ಪ್ರತೀ 1 ಪವನ್ ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ 2,500 ರೂ. ತಯಾರಿಕಾ ವೆಚ್ಚ ಕಡಿತವಿದೆ.
► 1 ವರ್ಷದ ಅವಧಿಯ ಗೋಲ್ಡ್ ಸೇವಿಂಗ್ ಯೋಜನೆಯಡಿ ಗ್ರಾಹಕರಿಗೆ ಉಚಿತ ಪ್ರವೇಶಾತಿ ಮತ್ತು ಯೋಜನೆ ಪೂರ್ಣಗೊಳಿಸುವ ಗ್ರಾಹಕರಿಗೆ ತಯಾರಿಕಾ ವೆಚ್ಚ ಸಂಪೂರ್ಣ ಕಡಿತವಿದೆ.
► ಶುಭಾರಂಭದ ಪ್ರಯುಕ್ತ ಮುದ್ರಿಸಲಾದ ಕರಪತ್ರದಲ್ಲಿ ಉಲ್ಲೇಖಿಸಲಾದ ವಿವರಗಳನ್ನು ಭರ್ತಿಗೊಳಿಸಿ ಉದ್ಘಾಟನಾ ದಿನದಂದು ಮಳಿಗೆಗೆ ತಂದುಕೊಟ್ಟರೆ ಗ್ರಾಹಕರ ಸಮಕ್ಷಮ ಪ್ರತೀ ಗಂಟೆಗೊಮ್ಮೆ ಚೀಟಿ ಎತ್ತುವ ಮೂಲಕ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿದೆ.