×
Ad

ಪೊಲೀಸರಿಗೆ 3 ಶಿಫ್ಟ್ ಮಾಡಲು ಸರಕಾರ ಮೇಲೆ ಒತ್ತಡ

Update: 2017-12-08 19:15 IST

ಮಂಗಳೂರು, ಡಿ.8: ಪೊಲೀಸರಿಗೆ ಈಗ ಕೇವಲ ಎರಡು ಶಿಫ್ಟ್ ಮಾತ್ರವಿದ್ದು ಇದನ್ನು ಮೂರು ಶಿಫ್ಟ್ ಮಾಡುವಂತೆ ತಾವು ಸರಕಾರದ ಮೇಲೆ ಒತ್ತಡ ಮಾಡುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದರು.

ಶುಕ್ರವಾರ ಅವರು ಕಂಕನಾಡಿ ಠಾಣೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಸಿಬ್ಬಂದಿ ವರ್ಗವನ್ನು ಹೆಚ್ಚಿಸಬೇಕು. ಹಾಗಾಗಿ ಮುಖ್ಯಮಂತ್ರಿಯ ಜೊತೆ ಮಾತುಕತೆ ನಡೆಸಿ ಸಿಬ್ಬಂದಿ ವರ್ಗವನ್ನು ಹೆಚ್ಚಿಸುವಂತೆ ಒತ್ತಡ ಹಾಕುವುದಾಗಿ ಹೇಳಿದರು.

ಕಂಕನಾಡಿ ನಗರ ಪೊಲೀಸ್ ಠಾಣೆ ಸ್ಥಾಪನೆಯಾದ ನಂತರ ಬಜಾಲ್, ಜಪ್ಪಿನಮೊಗರು, ಶಕ್ತಿನಗರ ಮುಂತಾದ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ಜೆ.ಆರ್.ಲೋಬೊ ಹೇಳಿದರು.

ಠಾಣೆಯಲ್ಲಿರುವ 4 ಕಂಪ್ಯೂಟರ್ ಸಾಕಾಗದು. ಹೆಚ್ಚುವರಿಯಾಗಿ 10 ಕಂಪ್ಯೂಟರ್ ನೀಡಬೇಕಿದೆ. ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಸುಧಾರಣೆ ತರುವ ಅಗತ್ಯವೂ ಇದೆ ಎಂದ ಜೆ.ಆರ್.ಲೋಬೊ, ಪೊಲೀಸರು ದೂರದ ಊರುಗಳಿಗೆ ಕೆಎಸ್ಸಾರ್ಟಿಸಿಯ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಸಂಚರಿಸಲು ಅವಕಾಶವಿದೆ. ಲಗ್ಸುರಿ ಅಥವಾ ಸೆಮಿ ಲಕ್ಸುರಿ ಬಸ್‌ಗಳಲ್ಲೂ ಅವಕಾಶ ಕೊಡುವಂತೆ ತಾನು ಒತ್ತಡ ಹಾಕುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News