ಕಿಂಡಿ ಅಣೆಕಟ್ಟಿನ ಸದ್ಭಳಕೆ ಮಾಡಿಕೊಳ್ಳಲು ಜೆ.ಆರ್.ಲೋಬೊ ಕರೆ
Update: 2017-12-08 19:19 IST
ಮಂಗಳೂರು, ಡಿ.8: ಭಟ್ರ ಕಟ್ಟು ಎಂಬಲ್ಲಿ 55 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಮತ್ತು ಪರಂಬೋಕು ತೋಡಿನ ದಡಾ ಸಂರಕ್ಷಣಾ ಕಾಮಗಾರಿಯನ್ನು ಶಾಸಕ ಜೆ.ಆರ್. ಲೋಬೊ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಣ್ಣ ನೀರಾವರಿ ಇಲಾಖೆಯ ನೆರವಿನಲ್ಲಿ ಮಾಡಲಾದ ಈ ಕಾಮಗಾರಿಯನ್ನು ಜನರು ಸದ್ಬಳಕೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷ ಡೆನ್ನಿಸ್ ಡಿಸಿಲ್ವಾ, ಹೆನ್ರಿ ಡಿಸೋಜ, ನಾಬರ್ಟ ಡಿಸೋಜ, ದಾನಿ ಡಿಸಿಲ್ವಾ, ಮೈಕಲ್ ಕ್ರಾಸ್ತಾ, ಕಾರ್ಪೊರೇಟರ್ ಬಿ.ಪ್ರಕಾಶ್ ಉಪಸ್ಥಿತರಿದ್ದರು.