×
Ad

ಫೆ.11 ರಂದು ಗುಡ್ಡೆಅಂಗಡಿಯಲ್ಲಿ ಉರೂಸ್

Update: 2017-12-08 19:54 IST

ಬಂಟ್ವಾಳ, ಡಿ. 8: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಹಝ್ರತ್ ಶೈಖ್ ಮೌಲವಿ (ನ.ಮ) ಅವರ ದರ್ಗಾ ಶರೀಫ್‌ನ 38ನೆ ವರ್ಷದ ಉರೂಸ್ ಕಾರ್ಯಕ್ರಮವು 2018ರ ಫೆ. 6 ರಿಂದ 11 ರವರೆಗೆ ನಡೆಯಲಿದೆ.

ಫೆ. 11ರಂದು ನಡೆಯುವ ಹಗಲು ಉರೂಸ್ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಸೀದಿ ಕಾರ್ಯದರ್ಶಿ ಬಶೀರ್ ಮೆಲ್ಕಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News