ಜಗತ್ತಿನ ಅತ್ಯಂತ ಹಳೆಯ ಕಣ್ಣು ಪತ್ತೆ

Update: 2017-12-08 15:49 GMT

ಲಂಡನ್, ಡಿ. 8: ಈಗ ಅಳಿದಿರುವ ಸಮುದ್ರ ಜೀವಿಯೊಂದರ 53 ಕೋಟಿ ವರ್ಷ ಹಿಂದಿನ ಪಳೆಯುಳಿಕೆಯನ್ನು ಸಂಶೋಧಕರು ಪತ್ತೆಹಚ್ಚಿದ್ದು, ಇದರಲ್ಲಿರುವ ಕಣ್ಣು ಈ ವರೆಗೆ ಪತ್ತೆಯಾದ ಕಣ್ಣುಗಳಲ್ಲೇ ಅತ್ಯಂತ ಹಳೆಯದು ಎಂಬುದಾಗಿ ಭಾವಿಸಲಾಗಿದೆ.

ಏಡಿಗಳು, ಜೇನು ಹುಳಗಳು ಮತ್ತು ಡ್ರಾಗನ್‌ಫ್ಲೈ (ಹೆಲಿಕಾಪ್ಟರ್ ಚಿಟ್ಟೆ)ಗಳು ಸೇರಿದಂತೆ ಇಂದಿನ ಹಲವಾರು ಪ್ರಾಣಿಗಳ ಕಣ್ಣುಗಳನ್ನು ಹೋಲುವ ಆದಿ ರೂಪದ ಕಣ್ಣನ್ನು ಈ ಪಳೆಯುಳಿಕೆ ಹೊಂದಿದೆ.

ಜೇಡಗಳು ಮತ್ತು ಏಡಿಗಳ ಪೂರ್ವಜರೆಂದು ಹೇಳಲಾಗುವ ‘ಟ್ರೈಲೊಬೈಟ್’ ಎಂದು ಕರೆಯಲಾಗುವ ಗಟ್ಟಿ ಚಿಪ್ಪಿನ ಜೀವಿಗಳು 54.1 ಮತ್ತು 25.1 ಕೋಟಿ ವರ್ಷಗಳ ನಡುವೆ ಜೀವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News