ಡಿ.10: ಕೃಷ್ಣ ಮಠದಲ್ಲಿ ವಿಷ್ಣು ಸಹಸ್ರನಾಮ
Update: 2017-12-08 21:44 IST
ಉಡುಪಿ, ಡಿ.8: ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಇತರ ಬ್ರಾಹ್ಮಣ ಸಂಘಗಳ ಸಹಭಾಗಿತ್ವದಲ್ಲಿ ಡಿ.10ರ ರವಿವಾರ ಬೆಳಗ್ಗೆ 6ಇರಂದ ಸಂಜೆ 6:30ರವರೆಗೆ ನಿರಂತರವಾಗಿ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಂಜುನಾಥ ಉಪಾಧ್ಯ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಸತ್ಸಂಕಲ್ಪ ಹಾಗೂ ಪ್ರೇರಣೆಯಿಂದ ಲೋಕ ಕಲ್ಯಾಣಾರ್ಥ ಶ್ರೀಕೃಷ್ಣ ಮಠದ ಚಂದ್ರಶಾಲೆ ಹಾಗೂ ಸೂರ್ಯ ಶಾಲೆಗಳಲ್ಲಿ ನಿರಂತರವಾಗಿ ಉದಯಾಸ್ತಮಾನ ಈ ಪಾರಾಯಣ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ವೆಂಕಟರಮಣ ಭಟ್, ಸಂಘಟನಾ ಕಾರ್ಯದರ್ಶಿ ಕೆ.ನಾಗರಾಜ ಉಪಾಧ್ಯಾಯ, ಕುದಿ ಶ್ರೀನಿವಾಸ ಭಟ್, ಎಂ.ಶ್ರೀನಿವಾಸ ಬಲ್ಲಾಳ್, ಶ್ರೀಕಾಂತ್ ಉಪಾಧ್ಯಾಯ, ರಾಮದಾಸ ಉಡುಪ ಉಪಸ್ಥಿತರಿದ್ದರು.