ರಾಜ್ಯ ಎಸ್.ವೈ.ಎಸ್. ವತಿಯಿಂದ ಸೀರತುನ್ನಬಿ ಸಪ್ತಾಹ
ಮಂಗಳೂರು, ಡಿ. 8: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ಪ್ರವಾದಿ ಜನ್ಮ ತಿಂಗಳ ಪ್ರಯುಕ್ತ ರಬೀಉಲ್ ಅವ್ವಲ್ ಕೊನೆಯ ವಾರವನ್ನು 'ಸೀರತುನ್ನಬೀ ಸಪ್ತಾಹ' ವಾಗಿ ಆಚರಿಸಲು ನಿರ್ಧರಿಸಿದ್ದು ಅದರ ಅಂಗವಾಗಿ ಶಾಖಾ ಮಟ್ಟದಲ್ಲಿ 'ಸೀರತ್ ಕೆಫೆ' ಸಂಗಮಗಳನ್ನು ಹಮ್ಮಿ ಕೊಳ್ಳಲಾಗುವುದು.
ಎಸ್.ವೈ.ಎಸ್. ಬ್ರಾಂಚ್ ವ್ಯಾಪ್ತಿಯ ಮದ್ರಸಾ, ಮಸೀದಿ, ಸಂಘಟನೆಯ ಕಚೇರಿ ಇನ್ನಿತರ ಪ್ರದೇಶಗಳಲ್ಲಿ ಪುಟ್ಟ ಸಭೆಗಳನ್ನು ಏರ್ಪಡಿಸಿಸವುದು, ಮದ್ಹ್ ಕಾವ್ಯದೊಂದಿಗೆ ಆರಂಭಿಸಿ ಸಹಿಷ್ಣುತೆಯ ಪ್ರವಾದಿ ಎಂಬ ವಿಷಯದಲ್ಲಿ ಹ್ರಸ್ವ ಸಂದೇಶ ಭಾಷಣ ನಡೆಸುವುದು, ಸಭಿಕರಿಗೆ ಪ್ರವಾದಿ ಸಂದೇಶ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುವುದು, ಒಂದು ಬ್ರಾಂಚ್ನ ವಿವಿಧ ಕಡೆಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಸೀರತ್ ಕೆಫೆಗಳನ್ನು ಸಂಘಟಿಸಬಹುದಾಗಿದೆ.
ಅಭಿಯಾನದ ಸಮಾರೋಪ ಸಮಾರಂಭವು ಡಿ. 18ರಂದು ದಾವಣಗೆರೆಯಲ್ಲಿ ನಡೆಯಲಿರುವುದು, ಈ ಬಗ್ಗೆ ಶಾಖಾ ಸಮಿತಿಗಳು ತಕ್ಷಣ ಸಭೆ ಕರೆದು ಕಾರ್ಯ ಪೃವೃತ್ತರಾಗುವಂತೆ ಎಸ್. ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.