ಸಾಲಿಹಾತ್ ನವೀಕೃತ ಕಂಪ್ಯೂಟರ್ ಕೊಠಡಿ ಉದ್ಘಾಟನೆ
ಉಡುಪಿ, ಡಿ. 9: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯ ನವೀಕೃತ ಕಂಪ್ಯೂಟರ್ ಕೊಠಡಿಯನ್ನು ಗಂಗೊಳ್ಳಿ ತೌಹಿದ್ ಶಾಲೆಯ ಟ್ರಸ್ಟಿ ಮುಜಿಬ್ ಸಿಕಂದರ್ ಇತ್ತೀಚೆಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸಕ್ತ ಕಾಲ ಘಟ್ಟದಲ್ಲಿ ಕಂಪ್ಯೂಟರ್ ಬಳಕೆ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ಜಗತ್ತಿನಲ್ಲಿ ನಡೆಯುವ ಆಗು-ಹೋಗುಗಳ ಸನ್ನಿವೇಶವನ್ನು ವೀಕ್ಷಿಸುವುದರ ಮೂಲಕ ತಾವು ಪಡೆದುಕೊಂಡ ಜ್ಞಾನವನ್ನು ವೃದ್ಧಿಸಿಕೊಂಡು ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ ವಹಿಸಿದ್ದರು. ವೇದಿಕೆಯಲ್ಲಿ ಅಶ್ಫಾಕ್ ಹುಸೇನ್ ಹೂಡೆ, ಖಜಾಂಚಿ ಅಬ್ದುಲ್ ಕಾದರ್, ಟ್ರಸ್ಟಿ ಮೌಲಾನ ಆದಂ ಸಾಹೇಬ್, ಶಿಕ್ಷಣ ಸಂಸ್ಥೆಯ ಆಡಳಿತಾಧಿ ಕಾರಿ ಅಸ್ಲಂ ಹೈಕಾಡಿ, ಪ್ರಾಂಶುಪಾಲರು, ಮುಖ್ಯ ಶಿಕ್ಷಕಿುರು, ಟ್ರಸ್ಟಿಗಳು ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಜಿ.ಇಮ್ತಿಯಾಝ್ ಸ್ವಾಗತಿಸಿದರು. ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಕುಲ್ಸುಮ್ ಅಬೂಬಕರ್ ಕಾರ್ಯಕ್ರಮ ನಿರೂಪಿಸಿ ದರು.