ಕಾರಾಜೆಯಲ್ಲಿ ಎಸ್ಸೆಸ್ಸೆಫ್ ಸೆಕ್ಟರ್ ಪ್ರತಿಭೋತ್ಸವ
Update: 2017-12-09 18:17 IST
ಬಂಟ್ವಾಳ, ಡಿ. 9: ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಪ್ರತಿಭೋತ್ಸವ-2017 ಕಾರ್ಯಕ್ರಮವು ಡಿ. 10ರಂದು ಕಾರಾಜೆ ನೂರುಲ್ ಹುದಾ ಮದ್ರಸ ವಠಾರದಲ್ಲಿ ನಡೆಯಲಿದೆ.
ಕಾರಾಜೆ ಮಸೀದಿ ಅಧ್ಯಕ್ಷ ಹಾಜಿ ಕೆ. ಶೇಖಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಖತೀಬ್ ಯೂಸುಫ್ ಮದನಿ ಉದ್ಘಾಟಿಸುವರು. ಸ್ವಾಗತ ಸಮಿತಿ ಚೆಯರ್‌ಮೆನ್ ಪಿ.ಎಸ್. ಯಹ್ಯಾ ಮದನಿ, ಪಾಣೆಮಂಗೂರು ಸೆಕ್ಟರ್ ಅಧ್ಯಕ್ಷ ಅಕ್ಬರ್ ಮದನಿ ಭಾಗವಹಿಸುವರು ಎಂದು ಸೆಕ್ಟರ್ ಕಾರ್ಯುದರ್ಶಿ ಉಸ್ಮಾನ್ ಸಖಾಫಿ ಸಜೀಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.