×
Ad

ಶರತ್ ಹತ್ಯಾ ಪ್ರಕರಣ: ಪತ್ತೆಹಚ್ಚಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ: ಡಿಜಿ ನೀಲಮಣಿ

Update: 2017-12-09 21:02 IST

ಬಂಟ್ವಾಳ, ಡಿ.9: ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯಾ ಪ್ರಕರಣವನ್ನು ಪತ್ತೆಹಚ್ಚಿದ ವಿಶೇಷ ಪೊಲೀಸ್ ತಂಡಕ್ಕೆ 2.80 ಲಕ್ಷ ರೂ.ನಗದು ಬಹುಮಾನವನ್ನು ರಾಜ್ಯಪೊಲೀಸ್ ಇಲಾಖೆಯ ಡಿಜಿ ನೀಲಮಣಿ ಅವರು ಘೋಷಿಸಿದ್ದಾರೆ.

ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಇನ್ ಸ್ಪೆಕ್ಟರ್ ಅಮನುಲ್ಲಾ, ಸಿಸಿಬಿ ಇನ್ ಸ್ಪೆಕ್ಟರ್ ಸುನೀಲ್ ಕುಮಾರ್ ಸಹಿತ ಒಟ್ಟು ನಾಲ್ವರು ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್  ಹಾಗೂ ಸಿಬ್ಬಂದಿ ಸೇರಿ 54 ಮಂದಿಗೆ ಈ ನಗದು ಬಹುಮಾನವನ್ನು ಹಂಚಿಕೆ ಮಾಡಲಾಗಿದೆ.

ಶರತ್ ಮಡಿವಾಳ ಹತ್ಯಾ ಪ್ರಕರಣವನ್ನು ಪತ್ತೆಹಚ್ಚುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಈ ನಗದು ಬಹುಮಾನ ಘೋಷಿಸಲಾಗಿದೆ ಎಂದು ಡಿಜಿ ನೀಲಮಣಿ ಅವರ ಪ್ರಕಟಣೆ ತಿಳಿಸಿದೆ.

ಬಂಟ್ವಾಳ ಇನ್ ಸ್ಪೆಕ್ಟರ್ ಎಂ.ಎಸ್.ಪ್ರಕಾಶ್, ಪುತ್ತೂರು ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಎಸ್ಸೈಗಳಾದ ನಂದಕುಮಾರ್, ರವಿ ಬಿ.ಎಸ್., ಜಗದೀಶ್ ರೆಡ್ಡಿ, ಶ್ಯಾಮ್ ಸುಂದರ್, ಚಂದ್ರಶೇಖರಯ್ಯ, ಲೋಲಾಕ್ಷ, ಗಂಗಾದರಪ್ಪ, ಮಂಜುನಾಥ್ ಮತ್ತು ಎಸ್ಸೈ ಸಂಜೀವ ಪುರುಷ ಹಾಗೂ ವಿವಿಧ ಠಾಣೆಯ, ಡಿಸಿಐಬಿಯ ಸಿಬ್ಬಂದಿ ಸೇರಿದಂತೆ 54 ಮಂದಿಯ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News