ಪಾಕ್‌ಗೆ ಅನಗತ್ಯವಾಗಿ ಹೋಗಬೇಡಿ: ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

Update: 2017-12-09 16:46 GMT

ವಾಶಿಂಗ್ಟನ್, ಡಿ. 9: ಅಗತ್ಯವಲ್ಲದ ಪಾಕಿಸ್ತಾನ ಭೇಟಿಯನ್ನು ಮುಂದೂಡುವಂತೆ ಅಮೆರಿಕ ತನ್ನ ನಾಗರಿಕರಿಗೆ ಶನಿವಾರ ಸೂಚನೆ ನೀಡಿದೆ. ವಿದೇಶಿ ಮತ್ತು ದೇಶಿ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದಾದ್ಯಂತ ಅಮೆರಿಕನ್ನರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ ಎಂದು ಅದು ಹೇಳಿದೆ.

ಪಾಕಿಸ್ತಾನದಲ್ಲಿ ವಿಭಜನವಾದಿ ದಾಳಿಗಳು ಸೇರಿದಂತೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಹೊರಡಿಸಲಾಗಿದೆ.

ಇದಕ್ಕೂ ಮೊದಲು ಮೇ 22ರಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರಯಾಣ ನಿರ್ಬಂಧ ಸಲಹೆ ಹೊರಡಿಸಿತ್ತು. ಆ ಸಲಹೆಯ ಜಾಗದಲ್ಲಿ ಈಗ ಹೊಸ ಸಲಹೆ ಬಂದಿದೆ.

ಪಾಕಿಸ್ತಾನದಲ್ಲಿರುವ ಅಮೆರಿಕದ ರಾಜತಾಂತ್ರಿಕರು ಮತ್ತು ರಾಜತಾಂತ್ರಿಕ ಕಚೇರಿಗಳ ಮೇಲೆ ಹಿಂದೆ ದಾಳಿಗಳಾಗಿವೆ ಹಾಗೂ ಈ ರೀತಿಯ ದಾಳಿಗಳು ಮುಂದುವರಿಯುಲಿವೆ ಎಂಬ ಸೂಚನೆಗಳು ಲಭಿಸಿವೆ ಎಂದು ಎಚ್ಚರಿಕೆ ನೀಡಲಾಗಿದೆ.

ಅಲ್ಲಿ ಭಯೋತ್ಪಾದಕರು ಮತ್ತು ಕ್ರಿಮಿನಲ್ ಗುಂಪುಗಳು ಹಣಕ್ಕಾಗಿ ವಿದೇಶೀಯರನ್ನು ಅಪಹರಿಸುತ್ತಿವೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News