ಎಸ್‌ವೈಎಸ್‌ನಿಂದ ಧನ ಸಹಾಯ ವಿತರಣೆ
Update: 2017-12-09 22:19 IST
ಮಂಗಳೂರು, ಡಿ. 9: ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ವತಿಯಿಂದ ನಡೆಯುವ 6ನೇ ವರ್ಷದ ಸಾಂತ್ವನ ಸಾಮೂಹಿಕ ವಿವಾಹದ ಹತ್ತು ಜೋಡಿ ವಧುವಿನ ಕುಟುಂಬಕ್ಕೆ ಪ್ರಾಥಮಿಕ ಖರ್ಚಿನ ಧನಸಹಾಯವನ್ನು ಎಸ್‌ವೈಎಸ್ ಕೇಂದ್ರ ಕಚೇರಿ (ಹೊಸನಗರ ಕೆ.ಸಿ. ರೋಡ್)ನಲ್ಲಿ ವಿತರಿಸಲಾಯಿತು.
ಈ ಸಂದರ್ಭ ಅಲ್‌ಹಾಜ್ ಕೆ.ಪಿ.ಹುಸೈನ್ ಸಅದಿ ಕೆಸಿ ರೋಡ್, ಎಸ್‌ವೈಎಸ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮ್ಮರ್ ಮಾಸ್ಟರ್, ಮ್ಯಾರೇಜ್ ವಿಭಾಗದ ಅಧ್ಯಕ್ಷ ಯುಬಿಎಂ ಮುಹಮ್ಮದ್ ಹಾಜಿ, ವಕ್ಫೃ್ ಸಲಹಾ ಸಮಿತಿ ಸದಸ್ಯ ಉಸ್ಮಾನ್ ತಲಪಾಡಿ, ಬಾವಹಾಜಿ ಪಿಲಿಕೂರು, ಅಬ್ಬಾಸ್ ಹಾಜಿ ಪೆರಿಬೈಲ್,ಬಿಎಚ್ ಇಸ್ಮಾಯೀಲ್, ಫಾರೂಕ್ ಕೆಎಂ ಮತ್ತಿತರರು ಉಪಸ್ಥಿತರಿದ್ದರು.