ಶ್ವೇತಭವನದ ಎದುರು ಅಮೆರಿಕನ್ ಮುಸ್ಲಿಮರ ಪ್ರಾರ್ಥನೆ

Update: 2017-12-09 17:02 GMT

ವಾಶಿಂಗ್ಟನ್, ಡಿ. 9: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಿದ ಅಮೆರಿಕದ ಕ್ರಮದ ವಿರುದ್ಧ ಪ್ರತಿಭಟನೆಯಾಗಿ ನೂರಾರು ಮುಸ್ಲಿಮರು ಶುಕ್ರವಾರ ಇಲ್ಲಿನ ಶ್ವೇತಭವನದ ಎದುರು ಪ್ರಾರ್ಥನೆ ನೆರವೇರಿಸಿದರು.

ಅಮೆರಿಕನ್ ಮುಸ್ಲಿಮ್ ಸಂಘಟನೆಗಳ ಕರೆಗೆ ಓಗೊಟ್ಟ ಜನರು, ಅಮೆರಿಕದ ಅಧ್ಯಕ್ಷರ ನಿವಾಸವಾದ ಶ್ವೇತಭವನದ ಎದುರಿನ ಉದ್ಯಾನವನವೊಂದರಲ್ಲಿ ಪ್ರಾರ್ಥನೆ ನಡೆಸಿದರು.

ಏಕಾಂಗಿಯಾದ ಅಮೆರಿಕ

ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸುವ ವಿಚಾರದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಏಕಾಂಗಿಯಾಗಿದೆ.

ಅಮೆರಿಕದ ನೂತನ ನೀತಿಯು ವಿಶ್ವಸಂಸ್ಥೆಯ ಹಿಂದಿನ ನಿರ್ಣಯಗಳಿಗೆ ಅನುಗುಣವಾಗಿಲ್ಲ ಎಂದು ಮಂಡಳಿಯಲ್ಲಿರುವ ಐದು ಐರೋಪ್ಯ ದೇಶಗಳು ಹೇಳಿವೆ.

ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಕಳವಳವನ್ನು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಶ್ಲಾಘಿಸಿದ್ದಾರೆ ಎಂದು ಫೆಲೆಸ್ತೀನ್‌ನ ಅಧಿಕೃತ ಸುದ್ದಿ ಸಂಸ್ಥೆ ‘ವಫ’ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News