×
Ad

ಆನ್‌ಲೈನ್ ತರಬೇತಿ ಡಿ. 17ಕ್ಕೆ ಉದ್ಘಾಟನೆ

Update: 2017-12-09 22:22 IST

ಉಡುಪಿ, ಡಿ. 9: ಶಿಕ್ಷಕರ ತರಬೇತಿ ಪಡೆಯದೇ ಶಿಕ್ಷಕರಾಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಆನ್‌ಲೈನ್ ಮೂಲಕ ತರಬೇತು ಗೊಳಿಸುವ ಕಾರ್ಯಕ್ಕೆ ಸಂಬಂಧಿಸಿ ಡಿಎಲ್‌ಇಡಿ ತರಬೇತಿಯನ್ನು ದೂರ ಸಂಪರ್ಕ ಕಾರ್ಯಕ್ರಮದ ಮೂಲಕ ಜಿಲ್ಲೆಯ ಅಧ್ಯಯನ ಕೇಂದ್ರಗಳಲ್ಲಿ ನೀಡುವ ಪ್ರಕ್ರಿಯೆ ಆರಂಭವಾಗಿದೆ.

ನೋಂದಾಯಿತ ಅಭ್ಯರ್ಥಿಗಳಿಗೆ ರವಿವಾರ ಹಾಗೂ ರಜಾ ದಿನಗಳಲ್ಲಿ ಕಾಂಟ್ಯಾಕ್ಟ್ ತರಗತಿಗಳು ನಡೆಯಲಿವೆ. ಇದೇ ಡಿ.17ರಂದು ಬೆಳಗ್ಗೆ 10 ಕ್ಕೆ ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಆನ್‌ಲೈನ್ ಮೂಲಕ ನೋಂದಾಯಿತ ಅಭ್ಯರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರುವಂತೆ ಡಯಟ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News