ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ: ಆಮದು- ರಫ್ತು ಕಾರ್ಯಾಗಾರ

Update: 2017-12-09 16:58 GMT

ಮಂಗಳೂರು, ಡಿ. 9: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಆಮದು ಮತ್ತು ರಫ್ತು ಕುರಿತು ಕಾರ್ಯಾಗಾರ ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಚೇತನ್ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ದೇಶದ ಆಮದು- ರಫ್ತು ಪರಿಸ್ಥಿತಿ ವಿವರಿಸಿ, ರಫ್ತು ಉದ್ಯಮಗಳಿಗೆ ಸರಕಾರ ನೀಡುವ ಪ್ರೋತ್ಸಾಹ ಯೋಜನೆಗಳ  ಬಗ್ಗೆ ಮಾಹಿತಿ ನೀಡಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ.ರಶೀದ್ ಅಧ್ಯಕ್ಷತೆ ವಹಿಸಿ, ಯುವಜನತೆ ಆಮದು- ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡು ವಿದೇಶಿ ವಿನಿಮಯ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಕೈಜೋಡಿಸಬೇಕು ಎಂದು  ಹೇಳಿದರು.

ಚೇಂಬರ್ ಆಡಳಿತಾಧಿಕಾರಿ ಖಾಲಿದ್ ತಣ್ಣೀರುಬಾವಿ ಖಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಸ್ವಾಗತಿಸಿದರು. ಖಜಾಂಚಿ ಮನ್ಸೂರ್ ಅಹ್ಮದ್ ಆಝಾದ್ ವಂದಿಸಿದರು. ಕಾರ್ಯದರ್ಶಿ ನಿಸಾರ್ ಮುಹಮ್ಮದ್ ಫಕೀರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News