ರಾಷ್ಟ್ರಮಟ್ಟದ ಜನಪದ ನೃತ್ಯ: ಪಾಪೆಮಜಲು ಪ್ರೌಢ ಶಾಲೆಗೆ ತೃತೀಯ ಪ್ರಶಸ್ತಿ

Update: 2017-12-09 17:44 GMT

ಪುತ್ತೂರು, ಡಿ. 9: ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯ ಅಧೀನದಲ್ಲಿ ದೆಹಲಿಯ ಎನ್.ಸಿ.ಇ ಆರ್ ಟಿ ಇ ಯಲ್ಲಿ ಡಿ. 5 ರಿಂದ 8 ರತನಕ ನಡೆದ ರಾಷ್ಟ್ರಮಟ್ಟದ ಜನಪದ ನೃತ್ಯದಲ್ಲಿ ಕರ್ನಾಟಕವನ್ನು ಪ್ರತಿನಿಸಿದ್ದ ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳು ಜಾಗತಿಕ ತಾಪಮಾನ ಇದರ ಕಾರಣಗಳು ಮತ್ತು ಪರಿಣಾಮವನ್ನು ವೀರಗಾಶೆ ಹಾಗೂ ಜಾಗತಿಕ ತಾಪಮಾನದಿಂದ ಪ್ರಪಂಚವನ್ನು ರಕ್ಷಿಸುವ ಕುರಿತು ಕಂಸಾಳೆ ಮೂಲಕ ಪ್ರದರ್ಶನ ನೀಡಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಒಟ್ಟು 32 ತಂಡಗಳು ಸ್ಪರ್ದೆಯಲ್ಲಿ ಭಾಗವಹಿಸಿದ್ದವು. ಶಾಲೆಯ ಗಣಿತ ಶಿಕ್ಷ ಪ್ರಕಾಶ್‌ಮೂಡಿತ್ತಾಯ, ಬೆಳ್ಳಾರೆ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಮಮತಾ ಎಮ್. ಜೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ಸ್ಪರ್ದೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ 9 ನೇ ತರಗತಿಯ ಅವನೀಶ್, ಪ್ರೀತೇಶ್ ಕೆ, ಸುಕೇತ್‌ಕುಮಾರ್, ಯೋಗೀಶ ಬಿ, ಸದೀಶ, ಪ್ರಜ್ಞಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ. ಸೇನಾಪತಿ, ಸರೋಜ್‌ಯಾದವ್, ಮಲಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News