ಭಟ್ಕಳ: ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Update: 2017-12-10 12:28 GMT

ಭಟ್ಕಳ, ಡಿ. 10: ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟ ಜಾಮಿಯಾಬಾದ್ ನ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ಜರಗಿತು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಹೆಬಳೆ ಗ್ರಾ.ಪಂ ಅಧ್ಯಕ್ಷ ಎನ್.ಡಿ.ಮೊಗೇರ್, ವಿದ್ಯಾರ್ಥಿಗಳು ಕ್ರೀಡೆಯನ್ನು ಸ್ಪರ್ಧಾ ಮನೋಭಾವನೆ ಯೊಂದಿಗೆ ತೆಗೆದುಕೊಳ್ಳಬೇಕು. ಗೆದ್ದೆನೆಂಬ ಆಹಂ ಅನ್ನು ಪ್ರದರ್ಶಿಸದೆ ಸೋತೆನೆಂಬ ಕೀಳರಿಮೆ ಬೆಳೆಸಿಕೊಳ್ಳದೆ ಸೋಲು, ಗೆಲುವು ಬದುಕಿನೊಂದಿಗೆ ಬೆರೆತುಕೊಂಡಿದೆ ಎಂದು ತಿಳಿದು ಯಶಸ್ವಿಗಳಾಗಿ ಜೀವಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಲ್ತಾಫ್ ಸಾಬ್, ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಸಿಯತೊಡಗಿದ್ದು, ಇದಕ್ಕೆಲ್ಲ ಇಂದಿನ ತಂತ್ರಜ್ಞಾನವೇ ಕಾರಣವಾಗಿದೆ. ಹಿಂದೆ ವಿದ್ಯಾರ್ಥಿಗಳು, ಯುವಕರು ಮೈದಾನದಲ್ಲಿ ಆಟ ಆಡುವುದು ಸಾಮಾನ್ಯವಾಗಿತ್ತು. ಆದರೆ ಇಂದು ಯಾರೂ ಕೂಡ ಮೈದಾನದಲ್ಲಿ ಕಾಣುವುದಿಲ್ಲ. ಮೂಬೈಲ್ ಮೂಲಕ ಎಲ್ಲ ಆಟಗಳನ್ನು ಆಡುತ್ತ ಕೋಣೆಯಲ್ಲಿ ದಿನ ಕಳೆಯುತ್ತಾರೆ ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ದೈಹಿಕ ಕ್ಷಮತೆ ಕುಸಿಯುತ್ತಿದೆ ಎಂದರು.

ಭಟ್ಕಳದ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವಿದೆ. ಆದರೆ ತರಬೇತಿಯ ಕೊರತೆಯಿದೆ. ಅಂಜುಮಾನ್ ಕ್ಯಾಂಪಸ್ ನಲ್ಲಿ ತಾನು ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ನೀಡಲು ಸಿದ್ಧನಾಗಿದ್ದು ಇದರ ಪ್ರಯೋಜನ ಭಟ್ಕಳದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ತರಬಿಯತ್ ಎಜುಕೇಶನ್ ಸೂಸೈಟಿಯ ಉಪಾಧ್ಯಕ್ಷ ಸೈಯದ್ ಅಶ್ರಫ್ ಬರ್ಮಾವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಧ್ಯಾಪಕ ಎಂ.ಆರ್.ಮಾನ್ವಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಬ್ದಲ್ಲಾ ರಬೀ ಖಲಿಫಾ ವಂದಿಸಿದರು. ವಿದ್ಯಾರ್ಥಿಗಳಾದ ಮಾನ್ ಇಕ್ಕೇರಿ, ಅಮಾನುಲ್ಲಾ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಹೆಬಳೆ ಪಂಚಾಯತ್ ಉಪಾಧ್ಯಕ್ಷ ಅಲಿ ಇಬ್ಬು, ಶಾಝೀರ್ ಹುಸೇನ್, ಅಬ್ದುಸ್ಸುಬಾನ್ ನದ್ವಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ನಾಯ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News