ನಾಟೆಕಲ್: ಸೋಶಿಯಲ್ ಅಚೀವ್‌ಮೆಂಟ್ ಪೋರಂನಿಂದ ಹಣ್ಣುಹಂಪಲು ವಿತರಣೆ

Update: 2017-12-10 12:33 GMT

ಕೊಣಾಜೆ, ಡಿ. 10: ಮಂಜನಾಡಿ ಗ್ರಾಮದ ನಾಟೆಕಲ್ ಸಮೀಪದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸರಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಸೋಶಿಯಲ್ ಅಚೀವ್‌ಮೆಂಟ್ ಪೋರಂ ವತಿಯಿಂದ ಮೀಲಾದುನ್ನಬಿ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಬ್ದುಲ್ ರಹ್ಮಾನ್ ನಂತರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಿರಾನ್ ಮೊಹಿದಿನ್, ಉದ್ಯಮಿ ಯು.ಟಿ.ಸಾದತ್, ಮನ್ಸೂರ್ ಸಾಮಣಿಗೆ, ಬಿರಾನ್, ಸೋಶಿಯಲ್ ಅಚೀವ್‌ಮೆಂಟ್ ಫಾರಂನ ಅಧ್ಯಕ್ಷ ನಾಸೀರ್ ಸಾಮಣಿಗೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಸಂಚಾಲಕ ನಿಯಾಝ್ ಸಾಮಣಿಗೆ, ಕಾರ್ಯದರ್ಶಿ ನವಾಝ್, ಪದಾಧಿಕಾರಿಗಳಾದ ಹನೀಫ್ ಮೊಂಟೆಪದವು, ರಿಯಾಝ್ ದೇರಳಕಟ್ಟೆ, ಲತೀಫ್ ಕೊಣಾಜೆ, ಯೂಸೂಫ್ ಅಸೈಗೋಳಿ, ಝಿಯಾದ್ ಸಾಮಣಿಗೆ, ಅಬ್ಬು ಕಲಾಯಿ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಮುರುಗಯ್ಯ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News