ಕೋಟೆಕಾರ್: ಮಖ್ದೂಮಿಯಾ ಶರೀಅತ್ ಕಾಲೇಜಿನ ಸನದುದಾನ ಸಮ್ಮೇಳನ

Update: 2017-12-10 12:54 GMT

ಉಳ್ಳಾಲ, ಡಿ. 10: ಕೋಟೆಕಾರ್ ಮಖ್ದೂಮಿಯಾ ಶರೀಅತ್ ಕಾಲೇಜಿನ ಪ್ರಥಮ ಸನದುದಾನ ಸಮ್ಮೇಳನ ಕೋಟೆಕಾರ್‌ನಲ್ಲಿ ನಡೆಯಿತು.

ಎಕೆಎಚ್‌ಎಂ ಟ್ರಸ್ಟ್ ಅಧ್ಯಕ್ಷ ಕೆ.ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ತೋಡಾರು ಸಂಶುಲ್ ಉಲಮಾ ಅರೆಬಿಕ್ ಕಾಲೇಜಿನ ಕಾರ್ಯಾಧ್ಯಕ್ಷ ಉಸ್ಮಾನುಲ್ ಫೈಝಿ ಮಖ್ದೂಮಿ ಉದ್ಘಾಟಿಸಿದರು. ಮಖ್ದೂಮಿಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಉಸ್ತಾದ್ ಹಾರೂನ್ ಅಹ್ಸನಿ ಸನದುದಾನ ಭಾಷಣ ಮಾಡಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುರ್ಶಿದುಲ್ ಅನಾಂ ಸಂಘಟನೆಯ ‘ಅಲ್ ಖಿದ್ಮ’ ಮಿಲಾದ್ ವಿಶೇಷ ಪುರವಾಣಿಯನ್ನು ಎಕೆಎಚ್‌ಎಂ ಟ್ರಸ್ಟ್ ಉಪಾಧ್ಯಕ್ಷ ಕೆ.ಅಬ್ದುಲ್ ರಹಿಮಾನ್ ಬಿಡುಗಡೆಗೊಳಿಸಿದರು.

ಅಬ್ದುಲ್ ಹಮೀದ್ ಖಂದಕ್, ಸುಲ್ಸನ್ ಮೊಯಿದ್ದೀನ್ ಕಾಸರಗೋಡು, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಶಮೀಂ ಸಖಾಫಿ, ಮಾಲಿಕ್ ಸೋನಾರ್ ಇಚ್ಲಂಗೋಡು ಮಸೀದಿಯ ಖತೀಬ್ ಅಬ್ದುಲ್ ಜಬ್ಬಾರ್ ಅಶ್ರಫಿ ಉಪಸ್ಥಿತರಿದ್ದರು.

ಎಕೆಎಚ್‌ಎಂ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬ್ದುಲ್ಲಾ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಝೈನ್ ಸಖಾಫಿ ಸ್ವಾಗತಿಸಿದರು. ಕೆ.ಎಂ.ಅಬ್ದುಲ್ ರಹೀಮ್ ವಂದಿಸಿದರು. ಖಲೀಲ್ ಅಂಜದಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News