ಬಿಹಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಿಗೆ ಹಫ್ತಾ ಬೆದರಿಕೆ

Update: 2017-12-10 14:43 GMT

ಬೆಟ್ಟಿಯಾ,ಡಿ.10: ಒಂದು ಲ.ರೂ.ಹಫ್ತಾ ನೀಡದಿದ್ದರೆ ತನ್ನನ್ನು ಕೊಲ್ಲುವುದಾಗಿ ವ್ಯಕ್ತಿಯೋರ್ವ ಬೆದರಿಕೆಯೊಡ್ಡ್ದಿದ್ದಾನೆ ಎಂದು ದೂರಿ ಬಿಹಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಖುರ್ಷಿದ್ ಆಲಂ ಅವರು ಪೊಲೀಸ್ ದೂರನ್ನು ದಾಖಲಿಸಿದ್ದಾರೆ.

ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಬೆಟ್ಟಿಯಾ ಎಸ್‌ಪಿ ವಿನಯ ಕುಮಾರ ತಿಳಿಸಿದರು.

 ಕರೆ ಮಾಡಿದ ವ್ಯಕ್ತಿ ತನ್ನನ್ನು ಸಮೀಪದ ಗೋವರ್ಧನ ನಿವಾಸಿ ಇಮ್ತಿಯಾಝ್ ಎಂದು ಗುರುತಿಸಿಕೊಂಡಿದ್ದ ಎಂದು ಆಲಂ ಶುಕ್ರವಾರ ಪುರುಷೋತ್ತಮಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಕೃತ್ಯವಾಗಿದೆಯೆಂದು ತಾನು ಭಾವಿಸಿದ್ದೇನೆ. ಆದರೂ ಪೊಲೀಸ್ ದೂರು ಸಲ್ಲಿಸಿದ್ದೇನೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ತನಗೆ ಪೂರ್ಣ ನಂಂಬಿಕೆಯಿದೆ ಎಂದು ಆಲಂ ತಿಳಿಸಿದರು.

ಅಲಂ ಈ ವರ್ಷ ಹಫ್ತಾ ದೂರನ್ನು ದಾಖಲಿಸಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ಜೂನ್‌ನಲ್ಲಿ ತಾನು ಪಾಟ್ನಾದ ತನ್ನ ನಿವಾಸದಲ್ಲಿದ್ದಾಗ ಹಫ್ತಾ ಬೆದರಿಕೆ ಕರೆ ಬಂದಿದ್ದಾಗಿ ಅವರು ದೂರಿನಲ್ಲಿ ಹೇಳಿದ್ದರು. ಪೊಲೀಸರು ನಂತರ ಆರೋಪಿಯನ್ನು ಬೆಟ್ಟಿಯಾದಲ್ಲಿ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News