ಕೇಂದ್ರ ಸರಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಆಹ್ವಾನ

Update: 2017-12-10 16:54 GMT

ಮಂಗಳೂರು, ಡಿ.10: ಕೇಂದ್ರ ಸರಕಾರದ ವಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪೋಸ್ಟಲ್ ಅಸಿಸ್ಟಂಟ್/ಸಾರ್ಟಿಂಗ್ ಅಸಿಸ್ಟಂಟ್, ಡಾಟಾ ಎಂಟ್ರಿ ಆಪರೇಟರ್(ಡಿಇಒ) ಹಾಗೂ ಲೋಯರ್ ಡಿಷನ್ ಕ್ಲರ್ಕ್ (ಎಲ್‌ಡಿಸಿ) ಹುದ್ದೆಗಳನ್ನು ಭರ್ತಿ ಮಾಡಲು ಸಂಯುಕ್ತ ಹಿರಿಯ ಸೆಕೆಂಡರಿ ಮಟ್ಟದ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಡಿ.18. ಅರ್ಜಿದಾರರು ಪಿ.ಯು.ಸಿ. ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಜ್ಞಾನವುಳ್ಳವರಾಗಿರಬೇಕು.

ವಯೋಮಿತಿ: ಕನಿಷ್ಠ-18 ವರ್ಷಗಳು. ಗರಿಷ್ಠ ವಯೋಮಿತಿ-ಸಾಮಾನ್ಯ ವರ್ಗ-27 ವರ್ಷಗಳು, ಒಬಿಸಿ-30 ವರ್ಷಗಳು, ಪ.ಜಾ/ಪ.ಪಂ-32 ವರ್ಷಗಳು (01-08-2018ಕ್ಕೆ).

ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಹಾಗೂ ಒಬಿಸಿಗೆ ಸೇರಿದ ಅಭ್ಯರ್ಥಿಗಳಿಗೆ- ರೂ.100, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕರುವುದಿಲ್ಲ.

ಕರ್ನಾಟಕದ ಬೆಂಗಳೂರು, ಧಾರವಾಡ, ಗುಲ್ಬರ್ಗ, ಮಂಗಳೂರು ಹಾಗೂ ಮೈಸೂರಿನಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್.:- http://ssc.nic.in or  http://ssconline.nic.in or http://ssconline2.gov.in http://ssc.nic.in  ಇದರಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ನಿಮಯ ಕಚೇರಿಯ ಪ್ರಕಟನೆ ತಿಳಿಸಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News