ಕೊಲ್ಲರಕೋಡಿ ಹಳೆ ವಿದ್ಯಾರ್ಥಿಗಳ ಕ್ರೀಡಾ ಕೂಟ
Update: 2017-12-10 23:24 IST
ಕೊಣಾಜೆ, ಡಿ.10: ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲರಕೋಡಿ ಹಳೆ ವಿದ್ಯಾರ್ಥಿ ಸಂಘ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಹಳೆ ವಿದ್ಯಾರ್ಥಿಗಳ ಕ್ರೀಡಾ ಕೂಟವು ಇಂದು ಕೊಲ್ಲರಕೋಡಿ ಶಾಲೆಯಲ್ಲಿ ನಡೆಯಿತು.ಕ್ರೀಡಾ ಕೂಟದಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕುಹಾಕಿಕೊಂಡರು. ಕ್ರೀಡಾ ಕೂಟದ ನೇತೃತ್ವವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ಮತ್ತು ಪ್ರಧಾನ ಸಂಘಟನಾ ಕಾರ್ಯದರ್ಶಿ ಅಶ್ರಫ್ ಎಸ್.ಎಚ್ ವಹಿಸಿಕೊಂಡಿದ್ದರು.
ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚೇತನ್ ಶೆಟ್ಟಿ, ಚಂದ್ರಹಾಸ್, ಸಲಾಮ್ ಎಮ್.ಎಚ್, ಇಕ್ಬಾಲ್ ಎಸ್.ಎಚ್, ಸಿದ್ದೀಕ್ ಜಿ.ಪಿ, ನೌಫಲ್ ಎಚ್ .ಕೊಲ್ಲರಕೋಡಿ ಕಾಸ್ಕ್ ಕ್ಲಬ್ ಕಾರ್ಯದರ್ಶಿ ಶಾಕಿರ್ ಎನ್.ಎಮ್, ಮೊದಲಾದವರು ಉಪಸ್ಥಿತರಿದ್ದರು.