ಕೈಕುಂಜ: ವಿವಾಹಿತೆ ಆತ್ಮಹತ್ಯೆ
Update: 2017-12-11 21:55 IST
ಬಂಟ್ವಾಳ, ಡಿ. 11: ಬಿ.ಸಿ.ರೋಡಿನ ಕೈಕುಂಜೆ ಪಶ್ಚಿಮ ಬಡಾವಣೆ ನಿವಾಸಿ ವಿವಾಹಿತೆ ಸುಲೋಚನಾ ಶೆಟ್ಟಿ (30) ಸೋಮವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಈ ರೀತಿ ಮಾಡಿರಬಹುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ಶಂಕಿಸಿದ್ದಾರೆ.
ಬೆಳಗ್ಗೆ ತನ್ನ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಕೊಠಡಿಗೆ ಸೇರಿ ಬಾಗಿಲು ಹಾಕಿದ್ದರು. ಮನೆಯಲ್ಲಿದ್ದ ಅವರ ತಾಯಿ ಕೆಲ ಹೊತ್ತಿನ ಬಳಿಕ ಬಾಗಿಲು ತೆಗೆಯಲು ಹೇಳಿದಾಗ ತೆರೆಯದೇ ಇದ್ದ ಕಾರಣ ಅನುಮಾನಪಟ್ಟು ಪಕ್ಕದ ಮನೆಯವರ ಬಳಿ ವಿಷಯ ತಿಳಿಸಿದ್ದು, ನಂತರ ಆತ್ಮಹತ್ಯೆ ಮಾಡಿ ಕೊಂಡದ್ದು ಬೆಳಕಿಗೆ ಬಂತು. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.