ಉರ್ವ ಮಾರ್ಕೆಟ್-ಮುಡಿಪು: ಮೊಬೈಲ್ ಅಂಗಡಿಯಿಂದ ಕಳವು
Update: 2017-12-11 22:04 IST
ಮಂಗಳೂರು, ಡಿ.11: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಉರ್ವ ಮಾರ್ಕೆಟ್ ಮತ್ತು ಮುಡಿಪು ಜಂಕ್ಷನ್ ಬಳಿಯ ಎರಡು ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ಮೊಬೈಲ್‌ಗಳನ್ನು ಕಳವುಗೈದ ಬಗ್ಗೆ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಉರ್ವ ಠಾಣಾ ವ್ಯಾಪ್ತಿಯ ಅಮೀದ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಗೆ ಡಿ.10ರ ರಾತ್ರಿ 9ರಿಂದ ಡಿ.11ರ ಬೆಳಗ್ಗೆ 7ರ ಮಧ್ಯೆ ಕಳ್ಳರು ಶಟರ್‌ನ ಬೀಗ ಮುರಿದು ಸುಮಾರು 20,500 ರೂ. ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.