ಉತ್ತರ ಕೊರಿಯದ ವಿರುದ್ಧ ಹೊಸ ದಿಗ್ಬಂಧನ ವಿಧಿಸಿದ ದಕ್ಷಿಣ ಕೊರಿಯ

Update: 2017-12-11 17:15 GMT

ಸಿಯೋಲ್ (ದಕ್ಷಿಣ ಕೊರಿಯ), ಡಿ. 11: ಉತ್ತರ ಕೊರಿಯದ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ದಕ್ಷಿಣ ಕೊರಿಯ ಸೋಮವಾರ ತನ್ನ ದಿಗ್ಬಂಧನಗಳ ಪಟ್ಟಿಗೆ ಸೇರಿಸಿದೆ.

ಇದು ಪ್ರಮುಖವಾಗಿ ಸಾಂಕೇತಿಕ ಕ್ರಮವಾಗಿದ್ದು, ಉತ್ತರ ಕೊರಿಯದ ಶಸ್ತ್ರಾಸ್ತ್ರ ಕಾರ್ಯಕ್ರಮಗಳಿಗೆ ಬರುವ ನಿಧಿಯನ್ನು ಕಡಿಗೊಳಿಸುವ ಉದ್ದೇಶವನ್ನು ಹೊಂದಿದೆ.

ದಕ್ಷಿಣ ಕೊರಿಯದ ದಿಗ್ಬಂಧನಗಳ ಪಟ್ಟಿಗೆ ಬ್ಯಾಂಕ್‌ಗಳು ಮತ್ತು ಕಂಪೆನಿಗಳು ಸೇರಿದಂತೆ ಉತ್ತರ ಕೊರಿಯದ 20 ಸಂಸ್ಥೆಗಳು ಮತ್ತು 12 ವ್ಯಕ್ತಿಗಳನ್ನು ಸೇರ್ಪಡೆಗೊಳಿಸಲಾಗಿದೆ.

 ಉತ್ತರ ಕೊರಿಯವು ನವೆಂಬರ್ 29ರಂದು ನಡೆಸಿದ ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ಆ ದೇಶದ ವಿರುದ್ಧ ದಕ್ಷಿಣ ಕೊರಿಯವು ಹೊಸ ದಿಗ್ಬಂಧನಗಳನ್ನು ವಿಧಿಸಿತ್ತು.

 ಆದಾಗ್ಯೂ, ಉಭಯ ಕೊರಿಯಗಳ ನಡುವಿನ ವ್ಯವಹಾರವು ಹಲವು ವರ್ಷಗಳಿಂದ ಸಂಪೂರ್ಣವಾಗಿ ನಿಂತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯದ ದಿಗ್ಬಂಧನವು ಕೇವಲ ಸಾಂಕೇತಿಕವಾಗಿದೆ. ಆದಾಗ್ಯೂ, ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ದಕ್ಷಿಣ ಕೊರಿಯ ಈ ಕ್ರಮಗಳನ್ನು ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News