2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ನಿಷೇಧ: ವೆನೆಝುವೆಲ ಅಧ್ಯಕ್ಷ

Update: 2017-12-11 17:20 GMT

ಕ್ಯಾರಕಸ್ (ವೆನೆಝುವೆಲ), ಡಿ. 11: ಮೇಯರ್ ಚುನಾವಣೆಯನ್ನು ಬಹಿಷ್ಕರಿಸಿದ ಪ್ರಮುಖ ಪ್ರತಿಪಕ್ಷಗಳಿಗೆ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲೂ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ವೆನೆಝುಯೆಲದ ಅಧ್ಯಕ್ಷ ನಿಕೊಲಸ್ ಮಡುರೊ ರವಿವಾರ ಘೋಷಿಸಿದ್ದಾರೆ.

ಮುನಿಸಿಪಲ್ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಈ ವಿಷಯ ಪ್ರಕಟಿಸಿದರು.

 ‘‘ನ್ಯಾಶನಲ್ ಕಾನ್ಸ್‌ಟಿಟ್ವೆಂಟ್ ಅಸೆಂಬ್ಲಿ ಈ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ’’ ಎಂದರು. ತನ್ನ ಜೊತೆಗೆ ಮೈತ್ರಿ ಹೊಂದಿರುವ ಪಕ್ಷಗಳ ಜೊತೆಗೆ ಮಡುರೊ ವಿವಾದಾತ್ಮಕ ನ್ಯಾಶನಲ್ ಕಾನ್ಸ್‌ಟಿಟ್ವೆಂಟ್ ಅಸೆಂಬ್ಲಿಯನ್ನು ರಚಿಸಿದ್ದಾರೆ. ಆದರೆ, ಇದರ ಸಿಂಧುತ್ವವನ್ನು ಅಂತಾರಾಷ್ಟ್ರೀಯ ಸಮುದಾಯ ಪ್ರಶ್ನಿಸುತ್ತಿದೆ.

‘‘ಅವರಿಗೆ ಚುನಾವಣೆಗಳು ಬೇಕಿಲ್ಲವಾದರೆ, ಅವರಿಗೆ ಏನು ಬೇಕು? ಇದಕ್ಕೆ ಏನು ಪರ್ಯಾಯ? ಆಂತರಿಕ ಯುದ್ಧವೇ?’’ ಎಂದು ಮಡುರೊ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News