ಉಳ್ಳಾಲ: ಟಿಪ್ಪು ಸುಲ್ತಾನ್ ಶಾಲಾ ಕ್ರೀಡಾಕೂಟ ಉದ್ಘಾಟನೆ

Update: 2017-12-13 11:53 GMT
ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಯು.ಕೆ.ಮೋನು ಇಸ್ಮಾಯಿಲ್, ಅಶೋಕ್ ಕುಮಾರ್ ಹಾಗೂ ವಿನಯ ಕುಮಾರಿ ಅವರನ್ನು ಸನ್ಮಾನಿಸಲಾಯಿತು.

ಉಳ್ಳಾಲ, ಡಿ. 13: ವಿದ್ಯಾರ್ಜನೆ ಸಮಯದಲ್ಲೇ ನಾವು ಶಾಂತಿ, ಸಂಯಮ, ಶಿಸ್ತು ಮುಂತಾದ ಮೌಲ್ಯಗಳಿಗೆ ಒಗ್ಗಿಕೊಂಡು ಮುನ್ನಡೆದರೆ ಮುಂದೆ ಶಾಂತಿಯುತ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.

ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆ ಯಜಮಾನ ಸರಿಯಿದ್ದರೆ ಮನೆಯವರೂ ಸರಿಯಿರುತ್ತಾರೆ, ಅದರಂತೆ ಟಿಪ್ಪು ಸುಲ್ತಾನ್ ಶಾಲೆ ಶಿಸ್ತು, ಗುಣಮಟ್ಟದ ಶಿಕ್ಷಣದಲ್ಲಿ ಹೆಸರು ಪಡೆದಿದ್ದು, ಇಲ್ಲಿನ ಮುಖ್ಯ ಶಿಕ್ಷಕರ ಸಹಿತ ಶಿಕ್ಷಕ ವರ್ಗದ ಪರಿಶ್ರಮ ಕಾರಣ ಎಂದು ಹೇಳಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಯು.ಕೆ. ಮೋನು ಇಸ್ಮಾಯಿಲ್, ಮಂಗಳೂರು ನಗರ ಮಖ್ಯ ಶಿಕ್ಷಕರು-ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ವಿನಯ ಕುಮಾರಿ, ಜಿಲ್ಲಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಎ.ಕೆ. ಮೊಹಿದ್ದೀನ್ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಉದ್ಯಮಿ ಯು.ಹಸೈನಾರ್ ಕ್ರೀಡಾಜ್ಯೋತಿ ಬೆಳಗಿಸಿದರು. ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಧ್ವಜರೋಹಣಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ಧ್ವಜ ವಂದನೆ ಸ್ವೀಕರಿಸಿದರು. ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ದಳ ಪುರಸ್ಕಾರ ನೀಡಿದರು. ಉದ್ಯಮಿ ಎಚ್.ಕೆ.ಖಾದರ್ ಬಹುಮಾನ ವಿತರಿಸಿದರು.

ಉಳ್ಳಾಲ ಠಾಣಾ ಉಪನರೀಕ್ಷಕ ವಿನಾಯಕ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ಮಂಗಳೂರು ನಗರ ಮಖ್ಯ ಶಿಕ್ಷಕರು-ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಕ್ಲಸ್ಟರ್ ಸಿಆರ್‌ಪಿ ನಳಿನಿ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ವಿನಯ, ಶಾಲೆಯ ಮಾಜಿ ಸಂಚಾಲಕ ಯು.ಕೆ.ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಡಿ. ವಂದಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News