ಬಿಟ್ ಕಾಯಿನ್ ವಿನಿಮಯ: ಆದಾಯ ತೆರಿಗೆ ಇಲಾಖೆಯಿಂದ ಸಮೀಕ್ಷೆ
ಹೊಸದಿಲ್ಲಿ, ಡಿ. 13: ತೆರಿಗೆ ವಂಚನೆಯ ಸಂದೇಹದ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ಬಿಟ್ ಕಾಯಿನ್ ವಿನಿಮಯ ಕುರಿತು ಆದಾಯ ತೆರಿಗೆ ಇಲಾಖೆ ಬುಧವಾರ ಸಮೀಕ್ಷಾ ಕಾರ್ಯಾಚರಣೆ ಆರಂಭಿಸಿದೆ.
ಬೆಂಗಳೂರು ತನಿಖಾ ದಳದ ಆದೇಶದಂತೆ ಇಲಾಖೆಯ ವಿವಿಧ ತಂಡಗಳು ಡಿಸೆಂಬರ್ 13ರಂದು ಬೆಳಗ್ಗೆ ದಿಲ್ಲಿ, ಬೆಂಗಳೂರು, ಹೈದರಾಬಾದ್, ಕೊಚ್ಚಿ ಹಾಗೂ ಗುರ್ಗಾಂವ್ ಸೇರಿದಂತೆ 9 ಇಂತಹ ವಿನಿಮಯ ಸ್ಥಳಗಳಿಗೆ ಭೇಟಿ ನೀಡಿದೆ.
ಹೂಡಿಕೆದಾರರು ಹಾಗೂ ವ್ಯಾಪಾರಿಗಳ ಗುರುತು, ಅವರಿಂದ ನಡೆದ ವ್ಯವಹಾರ, ಅವರ ಸಹವರ್ತಿಗಳ ಗುರುತು, ಇದಕ್ಕೆ ಸಂಬಂಧಿಸಿ ಅವರು ಬಳಸುತ್ತಿರುವ ಬ್ಯಾಂಕ್ ಖಾತೆ ಸಾಬೀತುಪಡಿಸಲು ಸಾಕ್ಷ ಸಂಗ್ರಹಕ್ಕೆ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತಂಡ ವಿವಿಧ ಹಣಕಾಸಿನ ದತ್ತಾಂಶ ಹಾಗೂ ಈ ವಿನಿಮಯ ಕಾರ್ಯ ನಿರ್ವಹಿಸುವ ಬಗೆಗಿನ ಮಾಹಿತಿ ಒಳಗೊಂಡಿದೆ ಹಾಗೂ ಇದು ದೇಶದಲ್ಲಿ ಬಿಟ್ ಕಾಯಿನ್ ವಿನಿಮಯದ ವಿರುದ್ಧ ನಡೆಯು ತ್ತಿರುವ ಮೊದಲ ಅತಿ ದೊಡ್ಡ ಕಾರ್ಯಾಚರಣೆ ಎಂದು ಅಧಿಕಾರಿ ಹೇಳಿದ್ದಾರೆ.