ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ: ಕೊನೆಯ ದಿನಾಂಕ ವಿಸ್ತರಣೆ

Update: 2017-12-13 13:17 GMT

ಹೊಸದಿಲ್ಲಿ, ಡಿ.13: ಬ್ಯಾಂಕ್ ಖಾತೆ ಹಾಗು ಕೆಲ ಹಣಕಾಸು ವ್ಯವಹಾರಗಳಿಗೆ ಆಧಾರ್ ಹಾಗು ಪಾನ್ ಕಾರ್ಡನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ,

ಹಳೆಯ ಹಾಗು ಹೊಸ ಬ್ಯಾಂಕ್ ಖಾತೆಗಳಿಗೆ ಮತ್ತು 50 ಸಾವಿರ ರೂ. ಮತ್ತು ಹೆಚ್ಚಿನ ಹಣಕಾಸು ವ್ಯವಹಾರಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರಕಾರ ಈ ಹಿಂದೆ ಹೇಳಿತ್ತು. ಈ ಹಿಂದೆ 2017ರ ಡಿಸೆಂಬರ್ 31 ಆಧಾರ್-ಬ್ಯಾಂಕ್ ಖಾತೆ ಜೋಡಣೆಗೆ ಕೊನೆಯ ದಿನವಾಗಿತ್ತು.

ಬ್ಯಾಂಕ್ ಗಳ ಮನವಿ ಹಾಗು ಕೆಲ ಮಾಹಿತಿಗಳು ಬಂದ ಹಿನ್ನೆಲೆಯಲ್ಲಿ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.  ವಿವಿಧ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲು ಬಯಸಿರುವುದಾಗಿ ಈ ಹಿಂದೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News