ಮಂಗಳೂರು: ರಾಜಸ್ಥಾನದ ಅಫ್ರೋಝ್ ಹತ್ಯೆ ಖಂಡಿಸಿ ಸಿಎಫ್ಐ ಪ್ರತಿಭಟನೆ

Update: 2017-12-13 13:20 GMT

ಮಂಗಳೂರು, ಡಿ. 13: ರಾಜಸ್ಥಾನದ ಅಫ್ರೋಝ್ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ನಗರದ ಜ್ಯೋತಿ ವೃತ್ತದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿ.

ರಾಜಸ್ಥಾನದ ರಾಜ್ ಸಮಂದ್ ಜಿಲ್ಲೆಯಲ್ಲಿ ಅಫ್ರೋಝ್ (50) ಎಂಬ ಕಾರ್ಮಿಕನನ್ನು ಅಪಹರಿಸಿ, ಗಂಭೀರವಾಗಿ ಹಲ್ಲೆ ನಡೆಸಿ, ಸಜೀವವಾಗಿ ದಹಿಸಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಸಿಎಫ್ಐ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಸಿಎಫ್ಐ ದಕಿಣ ಕನ್ನಡ ಜಿಲ್ಲಾಧ್ಯಕ್ಷ ಮುಹಮ್ಮದ್ ಅಥಾವುಲ್ಲಾ ಮಾತನಾಡಿ, ಲವ್ ಜಿಹಾದ್‌ ಹೆಸರಿನಲ್ಲಿ ಅಮಾಯಕ ವ್ಯಕ್ತಿಗಳ ಮೇಲಿನ ಹಲ್ಲೆ, ದರೋಡೆ ಮತ್ತು ಕೊಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶದ ಜವಾಬ್ದಾರಿಯನ್ನು ಹೊತ್ತುಕೊಂಡಂತಹ ಪ್ರಧಾನ ಮಂತ್ರಿ ಸೇರಿ ಯಾರು ಕೂಡ ಪ್ರತಿಕ್ರಿಯೆ ನೀಡದೆ ಇರುವುದು ಪ್ರಜಾಪ್ರಭುತ್ವ ವ್ಯಯಸ್ಥೆಯ ದೊಡ್ಡ ದುರಂತ. ಹಾಗು ರಾಜಸ್ತಾನದಲ್ಲಿ ನಡೆದ ಘಟನೆಯು ದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ, ಮುಂದಕ್ಕೆ ಇಂತಹಾ ಯಾವುದೇ ಘಟನೆಗಳು ಮರುಕಳಿಸಿದರೆ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಿಎಫ್ಐ ದ.ಕ. ಜಿಲ್ಲೆ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಪಿಜೆ, ಜಿಲ್ಲಾ ಕಾರ್ಯದರ್ಶಿ ಇಫಾಝ್, ಸಮಿತಿ ಸದಸ್ಯರಾದ ಅಶ್ವನ್ ಸಾದಿಕ್, ಶಾಕಿರ್, ಸಾದಿಕ್ ಜಾರತ್ತೂರ್ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯ ತಾಜುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News