ಡಿ.15-17: ಎಂಐಟಿ ವಜ್ರ ಮಹೋತ್ಸವ ಸಮಾರೋಪ

Update: 2017-12-13 14:17 GMT

ಮಣಿಪಾಲ, ಡಿ.13: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ವಜ್ರಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಸಂಸ್ಥೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಸಮಾಗಮ ಮತ್ತು ಸನ್ಮಾನ ಕಾರ್ಯಕ್ರಮ ಡಿ.15,16 ಮತ್ತು 17ರಂದು ಮಣಿಪಾಲದ ಎಂಐಟಿಯಲ್ಲಿ ನಡೆಯಲಿದೆ ಎಂದು ಎಂಐಟಿ ನಿರ್ದೇಶಕ ಡಾ.ಜಿ.ಕೆ. ಪ್ರಭು ತಿಳಿಸಿದ್ದಾರೆ.

ಬುಧವಾರ ಎಂಐಟಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. 1957ರಲ್ಲಿ ಡಾ.ಟಿ.ಎಂ.ಎ.ಪೈ ಮಣಿಪಾಲದಲ್ಲಿ ಪ್ರಾರಂಭಿಸಿದ ಮಣಿಪಾಲ ಇಂಜಿನಿಯರಿಂಗ್ ಕಾಲೇಜು, 1974ರಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ಬದಲಾಗಿದ್ದು, ಇದೀಗ ಸ್ಥಾಪನೆಯ 60 ವಷಗರ್ಳನ್ನು ಪೂರ್ಣಗೊಳಿಸಿದೆ ಎಂದರು.

ಕಳೆದೊಂದು ವರ್ಷದಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆದ ವಜ್ರಮಹೋತ್ಸವದ ಸಮಾರೋಪ ಮೂರು ದಿನಗಳ ಕೆಲ ವಿಶಿಷ್ಟ ಕಾರ್ಯಕ್ರಮ ಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.

ಡಿ.15ರಂದು ಬೆಳಗ್ಗೆ 9:30ರಿಂದ 12:30ರವರೆಗೆ 1967ರಲ್ಲಿ ಕಾಲೇಜಿ ನಿಂದ ತೇರ್ಗಡೆಗೊಂಡ ಇಂಜಿನಿಯರಿಂಗ್ ಪದವೀಧರ ಹಳೆವಿದ್ಯಾರ್ಥಿಗಳ ಗೋಲ್ಡನ್ ರಿ-ಯೂನಿಯನ್ ಕಾರ್ಯಕ್ರಮ ಎಂ.ವಿ.ಸೆಮಿನಾರ್ ಹಾಲ್‌ನಲ್ಲಿ ನಡೆಯಲಿದೆ. ಅದೇ ರೀತಿ ಡಿ.16ರಂದು ಬೆಳಗ್ಗೆ 1988-92ರ ಬ್ಯಾಚ್‌ನ ಹಳೆವಿದ್ಯಾರ್ಥಿಗಳ ಸಿಲ್ವರ್ ರಿ-ಯೂನಿಯನ್ ಕಾರ್ಯಕ್ರಮವು ಎಂಐಟಿಯ ಕ್ವಡ್ರಾಂಗಲ್‌ನಲ್ಲಿ ನಡೆಯಲಿದೆ ಎಂದರು.

ಲೇಡಿಸ್ ಹಾಸ್ಟೆಲ್ ಉದ್ಘಾಟನೆ: ಡಿ.17ರಂದು ಮಣಿಪಾಲ ಎಂಐಟಿ ಹಳೆವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಬೆಳಗ್ಗೆ 9:30ರಿಂದ 12ರವರೆಗೆ ನಡೆಯಲಿದೆ. ಎಂಐಟಿಯ 1961ರ ಮೊದಲ ಬ್ಯಾಚ್‌ನ ಪ್ರಥಮ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಎಂ.ಎಂ. ಕಾಮತ್ ಮುಖ್ಯ ಅತಿಥಿಯಾಗಿ ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಥಮ ಮಹಿಳಾ ಇಂಜಿನಿಯರಿಂಗ್ ಪದವೀಧರೆ (1972) ಸುಗುಣಿ ಕಾಮತ್ ನೂತನವಾಗಿ ನಿರ್ಮಿಸಲಾದ ಕಾಲೇಜಿನ ಮಹಿಳಾ ಹಾಸ್ಟೆಲ್ ಕಟ್ಟಡ ಬ್ಲಾಕ್-22ನ್ನು ಉದ್ಘಾಟಿಸಲಿದ್ದಾರೆ ಎಂದು ಡಾ.ಪ್ರಭು ತಿಳಿಸಿದರು.

ಹಳೆವಿದ್ಯಾರ್ಥಿಗಳಿಗೆ ಸನ್ಮಾನ:  1960ರ ಪ್ರಥಮ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳಾದ ಎಂ.ಎಂ.ಕಾಮತ್ ಅಲ್ಲದೇ ಜಿ.ಈಪನ್ ಹಾಗೂ ಕೆ.ಕೃಷ್ಣಮೂರ್ತಿ ಐತಾಳ್ ಮತ್ತು ಎಂಐಟಿಯ ಪ್ರಥಮ ಮಹಿಳಾ ಇಂಜಿನಿಯರಿಂಗ್ ಪದವೀಧರೆ ಸುಗುಣಿ ಕಾಮತ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

1960ರ ಪ್ರಥಮ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳಾದ ಎಂ.ಎಂ.ಕಾಮತ್ ಅಲ್ಲದೇ ಜಿ.ಈಪನ್ ಹಾಗೂ ಕೆ.ಕೃಷ್ಣಮೂರ್ತಿ ಐತಾಳ್ ಮತ್ತು ಎಂಐಟಿಯ ಪ್ರಥಮ ಮಹಿಳಾ ಇಂಜಿನಿಯರಿಂಗ್ ಪದವೀರೆಸುಗುಣಿಕಾಮತ್‌ಅವರನ್ನುಇದೇಸಂದರ್ದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು. ಕೊಳಲು ವಾದನ: ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಡಿ.17ರ ಸಂಜೆ 6:30ಕ್ಕೆ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಹಾಗೂ ಕೃಷ್ಣ ಫ್ಯೂಶನ್ ಬ್ಯಾಂಡ್ ನಿಂದ ಫ್ಯೂಶನ್ ಬಾಂಡ್ ಕಾರ್ಯಕ್ರಮ ನಡೆುಲಿದೆ ಎಂದೂ ಡಾ.ಪ್ರಭು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ. ಪೈ, ಡಾ.ಎಂ.ವಿ.ಕಿಣಿ, ಡಾ. ರಮೇಶ ಸಿ., ಪ್ರಸನ್ನ ಆರ್.ಕಲ್ಲಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News