ಮಂಗಳೂರಿನ ವಿಯಾನಿ ಅಂಥೋಣಿಯೊ ಡಿಕುನ್ಹಾ ಚಾಂಪಿಯನ್

Update: 2017-12-13 14:20 GMT

ಕಾಪು, ಡಿ.13: ಕಲಾಭಿಮಾನಿ ಸಂಘ ಕಾಪು, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಕಾಪು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಫಿಡೆ ಶ್ರೇಯಾಂಕದ ಶ್ರೀನಾರಾಯಣಗುರು ಟ್ರೋಫಿ ಚೆಸ್ ಟೂರ್ನಿಯ ಮುಕ್ತ ವಿಭಾಗದಲ್ಲಿ ಮಂಗಳೂರಿನ ವಿಯಾನಿ ಅಂಥೋಣಿಯೊ ಡಿ ಕುನ್ಹಾ ಪ್ರಥಮ ಸ್ಥಾನ ಗಳಿಸಿ 30 ಸಾವಿರ ರೂ. ನಗದು ಹಾಗೂ ಮಿರುಗುವ ಚಾಂಪಿಯನ್ ಟ್ರೋಫಿಯನ್ನು ಕೈಗೆತ್ತಿಕೊಂಡರು.

ಮಂಗಳೂರಿನ ಗಹನ್ ಎನ್.ಜಿ. ಮತ್ತು ತಮಿಳ್ನಾಡಿನ ಸಯ್ಯದ್ ಅನ್ವರ್ ಶಾಜುಲಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದರು. ಅಗಸ್ಟಿನ್ ಎ, ಅರವಿಂದ ಶಾಸ್ತ್ರಿ, ಇಶಾ ಶರ್ಮ, ರಾಮ್ ಎಸ್.ಕೃಷ್ಣನ್, ಅಭಿಜಿತ್ ಚೂಟಿಯ, ಶರಣ್ ರಾವ್, ನಾರಾಯಣ್ ಕೆ.ಭಟ್, ಯಶಸ್ ಡಿ., ಶಾಬ್ದಿಕ್ ವರ್ಮಾ, ರಾಜೇಶ್ ಕೆ., ಹರ್ಮನ್ ಡಿಯಾನ್ ಸಲ್ದಾನ, ನಿರಂಜನ್ ರಾಜೀವ್, ಅತುಲ್ ಶೆಟ್ಟಿ, ಅರವಿಂದ್ ಬಿ ಆರ್, ಸಿದ್ಧಾಂತ್ ಪ್ರಭು ಎಂ, ಗೋವರ್ಧನ್ ಸಿ, ಪೂರ್ಣೇಶ್ ಸಿ ಮೊಗವೀರ, ಸಾತ್ವಿಕ್ ಕುಮಾರ್ ಭಟ್, ನಂದನ್ ಎನ್ ಪ್ರಭು, ನಚಿಕೇತ ಅಡಿಗ, ಸಾಕ್ಷಾತ್ ಯು.ಕೆ, ದೀಪ್ತಿ ಲಕ್ಷ್ಮಿ ಕೆ. ಇವರು ಮುಕ್ತ ವಿಭಾಗದಲ್ಲಿ ನಂತರದ ಸ್ಥಾನಗಳನ್ನು ಪಡೆದು ನಗದು ಬಹುಮಾನ ಪಡೆದರು.

 ಶ್ರೇಯಾಂಕ 1000ರಿಂದ 1199ರವರೆಗಿನ ವಿಭಾಗದಲ್ಲಿ ಪ್ರಣವ್ ಎಂ., ಅಜಯ್‌ಕೃಷ್ಣ ಡಿ., ನಿಹಾಲ್ ಎನ್.ಶೆಟ್ಟಿ, 1200-1399 ವಿಭಾಗದಲ್ಲಿ ಶ್ರೀಶಾಂತ್ ಎಸ್. ರಾವ್, ಪ್ರಜ್ವಲ್ ಕೆ.ಎಂ, ಮನವೀತ್ ಕೆ. ಬಹುಮಾನಗಳನ್ನು ಪಡೆದರು. 7ವರ್ಷದೊಳಗಿನ ವಯೋಮಿತಿ ವಿಭಾಗದಲ್ಲಿ ಸಾರ್ಥಕ್ ಆನಂದ್ ದೇವಾಡಿಗ, ಶ್ರೀಯಾನ ಎಸ್ ಮಲ್ಯ, 9ರಲ್ಲಿ ಅಯ್ಯರ್ ಅರವಿಂದ್, ಜೇತ್ರ ಮಯ್ಯ, 11ರಲ್ಲಿ ಆದಿತ್ಯ ಮೆನನ್, ಯಶಸ್ವೀ ನಾಡ, 13ರಲ್ಲಿ ಅಶುತೋಷ್ ಎಸ್ ಶರ್ಮ, ಖುಷಿ ಎಂ. ಹೊಂಬಾಳ್, 15ರಲ್ಲಿ ಪ್ರಜ್ವಲ್ ಪಿ ಪೂಜಾರಿ, ಅನನ್ಯ ಬಿ ಪ್ರಥಮ ಸ್ಥಾನಗಳನ್ನು ಗಳಿಸಿದರು.

ಅತ್ಯುತ್ತಮ ಉಡುಪಿ ಜಿಲ್ಲಾ ಆಟಗಾರನಾಗಿ ಹರೀಶ್ ಕುಮಾರ್, ಕಾಪು ಆಟಗಾರನಾಗಿ ರಿತೇಶ್ ಭಟ್, ಕಿರಿಯ ಆಟಗಾರನಾಗಿ ನಿಹಾನ್ ಬಿ, ಹಿರಿಯ ಆಟಗಾರನಾಗಿ ಪ್ರಭಾಕರನ್ ಕೆ. ಇವರು ಪ್ರಶಸ್ತಿಗಳನ್ನು ಪಡೆದರು. ದೇಶಾದ್ಯಂತ ದಿಂದ ಒಟ್ಟು 384 ಸ್ಪರ್ಧಿಗಳು ಎರಡು ದಿನಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಒಟ್ಟು 2 ಲಕ್ಷ ರೂ. ಮೌಲ್ಯದ ಬಹುಮಾನಗಳನ್ನು ವಿತರಿಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಲಾಲಾಜಿ ಮೆಂಡನ್ ವಹಿಸಿದ್ದರು. ಉದ್ಯಮಿ ಮುತ್ತುಕುಮಾರ್, ಹರೀಶ್ ಪೂಜಾರಿ, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಕೆ.ಪಿ.ಆಚಾರ್ಯ, ಸಮಾಜ ಸೇವಕ ಲೀಲಾಧರ ಶೆಟ್ಟಿ ಕಾಪು, ಸಂಯುಕ್ತ ಕರ್ನಾಟಕ ಚೆಸ್ ಸಂಸ್ಥೆ ಕಾರ್ಯದರ್ಶಿ ಅರವಿಂದ ಶಾಸ್ತ್ರಿ, ಬೆಂಗಳೂರಿನ ಎಚ್.ಬಿ. ಸಿದ್ದರಾಜು, ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ರಾಜ್‌ಗೋಪಾಲ್ ಶೆಣೈ, ಕಾರ್ಯದರ್ಶಿ ಬಾಬು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಕಲಾಭಿಮಾನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಸ್ವಾಗತಿಸಿದರು. ಪಂದ್ಯಕೂಟದ ಸಂಯೋಜಕ ಉಮಾನಾಥ್ ಕಾಪು ವಂದಿಸಿದರು. ನಿರ್ದೇಶಕ ಸಾಕ್ಷಾತ್ ಯು.ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News