“ಬದುಕುವುದನ್ನೇ ಕಷ್ಟವಾಗಿಸುತ್ತೇನೆ”

Update: 2017-12-13 16:24 GMT

ಲಕ್ನೊ, ಡಿ.13: ಉತ್ತರ ಪ್ರದೇಶದ ಬಾರಬಂಕಿ ಎಂಬಲ್ಲಿ ಬಿಜೆಪಿ ಸಂಸದೆಯೊಬ್ಬರು ಅತಿಕ್ರಮಣ ನಿಗ್ರಹ ಅಭಿಯಾನದ ನೇತೃತ್ವವಹಿಸಿದ್ದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಬೆದರಿಕೆ ಹಾಕಿದ ಘಟನೆ ನಡೆದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ಸಂಸದೆ ಪ್ರಿಯಾಂಕ ಸಿಂಗ ರಾವತ್ ಬಾರಬಂಕಿಯಲ್ಲಿ ಅಭಿಯಾನದ ನೇತೃತ್ವವಹಿಸಿದ್ದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಜಯ್ ದ್ವಿವೇದಿ ಅವರನ್ನು ಕುರಿತು, ನನ್ನ ಕ್ಷೇತ್ರದ ಜನತೆ ಮತ್ತು ನನ್ನ ಕಾರ್ಯಕರ್ತೆ ಸ್ವಲ್ಪ ಕೂಡಾ ಸಮಸ್ಯೆಯಾದರೆ ಬಾರಬಂಕಿಯಲ್ಲಿ ಬದುಕುವುದನ್ನೇ ಕಷ್ಟವಾಗಿಸುತ್ತೆನೆ ಎಂದು ಬೆದರಿಕೆ ಹಾಕಿರುವುದಾಗಿ ವರದಿಗಳು ತಿಳಿಸಿವೆ.

 ಚೈಲಾ ಗ್ರಾಮದಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಸರಕಾರಿ ಶಾಲೆ ಮತ್ತು ಬಾವಿಯನ್ನು ಅತಿಕ್ರಮಿಸಿಕೊಂಡಿರುವುದನ್ನು ಪ್ರಶ್ನಿಸಲು ದ್ವಿವೇದಿ ಮತ್ತವರ ತಂಡ ಗ್ರಾಮಕ್ಕೆ ತೆರಳಿತ್ತು. ಸ್ಥಳೀಯ ಜನರ ಜೊತೆ ದ್ವಿವೇದಿ ಮಾತುಕತೆ ನಡೆಸುತ್ತಿದ್ದಾಗ ತನ್ನ ಬೆಂಬಲಿಗರ ಜೊತೆ ಅಲ್ಲಿಗಾಗಮಿಸಿದ ರಾವತ್ ದ್ವಿವೇದಿ ಮೇಲೆ ರೇಗಾಡಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News